ಚಿನ್ನದ ನಾಡಲ್ಲಿ ಯೇಸು ಸ್ಮರಣೆ, ಸಾಮೂಹಿಕ ಪ್ರಾರ್ಥನೆ

251220 Raichur Christmas Mass Prayer
ರಾಯಚೂರಿನ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ನಿಮಿತ್ತ ಶುಕ್ರವಾರ ಕ್ರೈಸ್ತರು ವಿಶೇಷ ಪ್ರಾರ್ಥನೆ ನೆರವೇರಿಸಿದರು.
Published on

ರಾಯಚೂರು: ಯೇಸುಕ್ರಿಸ್ತನ ಜನ್ಮದಿನವಾದ ಶುಕ್ರವಾರದಂದು ಜಿಲ್ಲಾದ್ಯಂತ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ನಗರದ ಮೆಥೋಡಿಸ್ಟ್ ಚರ್ಚ್ ಸೇರಿ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೇಕ್ ಕತ್ತರಿಸಿ, ಸಂಭ್ರಮಿಸಿದರು. ಕೆಲವೆಡೆ ಮಕ್ಕಳಿಗೆ ದೀಕ್ಷೆ ಕೊಡಲಾಯಿತು.

ಧರ್ಮಗುರುಗಳು ಬೈಬಲ್ ಪಠಿಸಿ, ಧರ್ಮ ಬೋಧನೆ ಮಾಡಿದರು. ಮೆಥೋಡಿಸ್ಟ್ ಚರ್ಚ್‌ನಲ್ಲಿ ಜಿಲ್ಲಾ ಮೇಲ್ವಿಚಾರಕ ಎ.ಸೀಮೋನ್, ಸಭಾ ಪಾಲಕರಾದ ಆರ್.ಸ್ಯಾಮುವೆಲ್, ಜಯವಂತ ಎಲಿಯಾ ಕ್ರಿಸ್ತ ಸಂದೇಶ ಪಠಿಸಿದರು. ಶಾಸಕ ಡಾ.ಶಿವರಾಜ ಪಾಟೀಲ್, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್, ಸದಸ್ಯರಾದ ಜಯಣ್ಣ, ಬಿ.ರಮೇಶ್, ಜಿ.ಪಂ. ಸದಸ್ಯ ಹೇಮಾವತಿ ಸತೀಶಕುಮಾರ್, ಸಮಾಜ ಮುಖಂಡರಾದ ಎಂ.ಸ್ಯಾಮಸನ್, ಸೋಲೊಮನ್ ಕುಮಾರ್, ಸನ್‌ಪಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net