ಚಿನ್ನಾಭರಣ ಕಳವು ಆರೋಪಿ ಬಂಧನ

arrested
Published on

ಮೈಸೂರು; ಮನೆಗಳ್ಳತನ ಮಾಡಿದ್ದ ಮಹಿಳಾ ಆರೋಪಿಯನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ.


ಇತ್ತೀಚೆಗೆ ಯರಗನಹಳ್ಳಿಯ ಜನತಾ ಕಾಲನಿಯ ಮನೆಯೊಂದರಲ್ಲಿ ಚಿನ್ನದ ಒಡವೆಗಳ ಕಳ್ಳತನವಾಗಿತ್ತು. ಈ ಕುರಿತು ಡಿ.28ರಂದು ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇಲಿಂದ ಮೇಲೆ ಮನೆಗೆ ಬರುತ್ತಿದ್ದ ಅನುಮಾನಿತ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಪತ್ತೆಯಾಗಿದೆ.

ಆಕೆಯಿಂದ 2.50 ಲಕ್ಷ ರೂ.ಮೌಲ್ಯದ 52 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಮಹಿಳೆ ವಿರುದ್ಧ ಮಂಡ್ಯ ಗ್ರಾಮಾಂತರ, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net