ಮರಳಿ ಸಿಕ್ತು ಕಳೆದು ಹೋದ ಚಿನ್ನದ ಆಭರಣ

MBR GOLD
ಮಲೆಬೆನ್ನೂರಿನಲ್ಲಿ ಆಟೋಚಾಲಕ ವಿಜಯಕುಮಾರ್ ಅವರಿಗೆ ಸಿಕ್ಕ ಚಿನ್ನದ ಆಭರಣಗಳಿದ್ದ ಬ್ಯಾಗ್ ಅನ್ನು ವಾರಸುದಾರ ಶಕೀಲ್ ಅವರಿಗೆ ಪೊಲೀಸರ ಸಮ್ಮುಖದಲ್ಲಿ ಒಪ್ಪಿಸಲಾಯಿತು.
Published on

ಮಲೇಬೆನ್ನೂರು: ರಸ್ತೆಯಲ್ಲಿ ಸಿಕ್ಕ ನೂರು ಗ್ರಾಂ ಚಿನ್ನದ ಆಭರಣ ಇದ್ಗ ಬ್ಯಾಗ್ ಅನ್ನು ಶುಕ್ರವಾರ ಪೊಲೀಸರಿಗೆ ತಲುಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹಾಲಿವಾಣ ರಸ್ತೆಯಲ್ಲಿ. ಚಿನ್ನವನ್ನು ಮರಳಿಸಿದ ಆಟೋ ಚಾಲಕ ಹಾಲಿವಾಣದ ವಿಜಯಕುಮಾರ್.

ಘಟನೆಯ ವಿವರವನ್ನು ನೋಡುವುದಾದರೆ ಶಕೀಲ್ ಎಂಬುವವರು ಕಾರಿನಲ್ಲಿ ಹುಬ್ಬಳ್ಳಿಯಿಂದ ಹೊನ್ನಾಳಿಗೆ ತೆರಳುತ್ತಿದ್ದರು.

ಅವರ ಚಿನ್ನದ ಆಭರಣಗಳಿದ್ದ ಬ್ಯಾಗ್ ಹಾಲಿವಾಣ ಕ್ರಾಸ್ ಬಳಿ ಬಿದ್ದಿದೆ. ಇದೇ ಮಾರ್ಗದಲ್ಲಿ ಬಂದ ಆಟೋ ಚಾಲಕ ವಿಜಯಕುಮಾರ್ ಬ್ಯಾಗ್ ಅನ್ನು ಗಮನಿಸಿದ್ದಾರೆ.

ಬ್ಯಾಗ್ ತೆರೆದುನೋಡಿದಾಗ ಅದರಲ್ಲಿ ಚಿನ್ನದ ಒಡವೆಗಳಿರುವುದು ಕಂಡು ಬಂದಿದೆ. ವಿಜಯಕುಮಾರ್ ತಡಮಾಡದೇ ಮಲೇಬೆನ್ನೂರು ಪೊಲೀಸ್ ಠಾಣೆಗೆ ತೆರಳಿ, ಚಿನ್ನದ ಆಭರಣಗಳಿದ್ದ ಬ್ಯಾಗ್ ಅನ್ನು ಪಿಎಸ್‌ಐ ಪ್ರಭು ಕೆಳಗಿನಮನಿ ಅವರಿಗೆ ಒಪ್ಪಿಸಿದ್ದಾರೆ.

ಸ್ವಲ್ಪ ಹೊತ್ತು ಕಳೆದ ಬಳಿಕ ಚಿನ್ನದ ಆಭರಣಗಳ ಬ್ಯಾಗ್ ಕಳೆದುಕೊಂಡಿದ್ದ ಶಕೀಲ್ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ.

ವಿಚಾರಣೆ ನಂತರ ಚಿನ್ನದ ಆಭರಣಗಳ ಬ್ಯಾಗ್ ಶಕೀಲ್ ಅವರಿಗೆ ಸೇರಿದ್ದನ್ನು ದೃಢಪಡಿಸಿಕೊಂಡು ಪೊಲೀಸರು ಅದನ್ನು ಮರಳಿ ನೀಡಿದ್ದಾರೆ.

ಪಿಎಸ್‌ಐ ಪ್ರಭು ಕೆಳಗಿನಮನೆ, ಪಿಎಸ್‌ಐ ಯುವರಾಜ್ ಕಂಬಳಿ ಅವರು ವಿಜಯಕುಮಾರ್ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದರಲ್ಲದೇ, ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net