ಕಬ್ಬಿನ ಹಾಲು ಕುಡಿಯುವಾಗ ಚಿನ್ನಾಭರಣ ಎಸ್ಕೇಪ್

doddapete-police-station
ಶಿವಮೊಗ್ಗ ದೊಡ್ಡಪೇಟೆ ಠಾಣೆ
Published on

ಶಿವಮೊಗ್ಗ: ನಗರದ ಗಾಂಧಿಬಜಾರ್‌ನ ಕಬ್ಬಿನ ಅಂಗಡಿಯಲ್ಲಿ ಹಾಲು ಕುಡಿಯುವಾಗ ಮಹಿಳೆಯ ಪರ್ಸ್‌ನಲ್ಲಿದ್ದ 3.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಲಾಗಿದೆ.

ತಾಲೂಕಿನ ವೀರಣ್ಣನಬೆನವಳ್ಳಿ ಗ್ರಾಮದ ಸವಿತಾ ಚಿನ್ನಾಭರಣ ಕಳೆದುಕೊಂಡವರು. ಸಹೋದರಿ ಅಭಿಲಾಷಿಣಿ ಅವರ ಜತೆ ಚಿನ್ನದಂಗಡಿಗೆ ಬಂದಿದ್ದ ಸವಿತಾ ಅವರು 6.780 ಗ್ರಾಂನ ಹ್ಯಾಂಗಿಂಗ್ಸ್ ಮತ್ತು ಕಿವಿ ಮಾಟಿಯನ್ನು ಖರೀದಿಸಿದ್ದರು.
ಬಳಿಕ ಸಮೀಪದ ಕಬ್ಬಿನ ಅಂಗಡಿಗೆ ತೆರಳಿ ಹಾಲು ಕುಡಿದಿದ್ದರು. ಬಳಿಕ ಅಂಗಡಿಯವನಿಗೆ ಹಣ ಕೊಡಲು ಪರ್ಸ್ ನೋಡಿದಾಗ ಜಿಪ್ ಅರ್ಧ ತೆರೆದಿತ್ತು. ಪರ್ಸ್ ತಪಾಸಣೆ ನಡೆಸಿದಾಗ ಚಿನ್ನಾಭರಣ ಇರಲಿಲ್ಲ. ಈ ಬಗ್ಗೆ ಸವಿತಾ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net