

ಮೈಸೂರು: ನಗರದ ಪ್ರತಿಭಾನ್ವಿತ ಈಜುಪಟು ಎಸ್.ತಾನ್ಯಾ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಯೂತ್ ಗೇಮ್ಸ್-2024 ಈಜು ಸ್ಪರ್ಧೆಯಲ್ಲಿ ಚಿನ್ನ ಪದಕ ಪಡೆದು ಗಮನ ಸೆಳೆದಿದ್ದಾರೆ. ಆ ಮೂಲ ಮಟ್ಟದ ಖೇಲೋ ಇಂಡಿಯಾ ಈಜು ಚಿನ್ನದ ಪಕದ ಸಾಧನೆ ಮಾಡಿದ ಮೈಸೂರಿನ ಮೊದಲ ಮಹಿಳಾ ಈಜುಪಟು ಎನಿಸಿಕೊಂಡಿದ್ದಾರೆ. ಆ ಮೂಲಕ ಸಾಂಸ್ಕೃತಿಕ ನಗರಿಯ ಕೊರಗನ್ನು ನೀಗಿಸಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಈಜು ಸ್ಪರ್ಧೆಯ 400 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಾನ್ಯಾ ಜೆ.ಪಿ.ನಗರ ಈಜು ಕೊಳದಲ್ಲಿ ಪಿ.ಪವನ್ ಕುಮಾರ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ.
ಜೆ.ಪಿ.ನಗರದ ಎಸ್.ಪಿ.ಷಡಕ್ಷರಿ ಮತ್ತು ಎನ್.ಶ್ವೇತಾ ದಂಪತಿಯ ಪುತ್ರಿ ತಾನ್ಯಾ, ಶ್ರೀ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿನಿ.