ಸ್ಕ್ವಾಯ್ ಮಾರ್ಷಲ್ ಆರ್ಟ್ಸ್‌ನಲ್ಲಿ ಸೋಹನ್ ಮೌರ್ಯಗೆ ಚಿನ್ನ

IMG-20240107-WA0110
Published on

ಹೊಳೆನರಸೀಪುರ: ರಾಜಸ್ಥಾನದ ಜೈಪುರದಲ್ಲಿರುವ ಸುರೇಶ್ ಜ್ಞಾನ ವಿಹಾರ್ ಯುನಿವರ್ಸಿಟಿಯಲ್ಲಿ ಸ್ಕ್ವಾಯ್ ಅಸೋಸಿಯೇಷನ್ ಆಫ್ ರಾಜಸ್ಥಾನ್ ಮತ್ತು ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ 24ನೇ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಹೊಳೆನರಸೀಪುರ ಸ್ಕ್ವಾಯ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು 1 ಚಿನ್ನ ಮತ್ತು 9 ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಅಂಡರ್ 14 ಬಾಲಕರ ವಿಭಾಗದಲ್ಲಿ ಡಿ.ವಿ.ಸೋಹನ್ ಮೌರ್ಯ ಅವರು ಜಮ್ಮು ಕಾಶ್ಮೀರ, ರಾಜಸ್ಥಾನ, ತೆಲಂಗಾಣದ ಕ್ರೀಡಾಪಟುಗಳೊಂದಿಗೆ ಸೆಣಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎಚ್.ವೈ.ಮೋಹನ್‌ಕುಮಾರ್, ವಿ.ಲಿಖಿತ್, ದಿವಿತ್ ವೈ.ಗೌಡ, ಎಂ.ನಿತಿನ್, ಎಚ್.ಎಂ.ಪ್ರೇಮ್‌ಕುಮಾರ್, ಫಯಾಜ್ ಖಾನ್, ಮೊಹಮ್ಮದ್ ಅಬ್ಬಾಸ್, ಡಿ.ಶಂಕರ್ ದಯಾಳ್ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಎಲ್.ರೀತು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಹಾಸನ ಜಿಲ್ಲಾ ಸ್ಕ್ವಾಯ್ ಸಂಸ್ಥೆಯ ಗೌರವಾಧ್ಯಕ್ಷ ಎಚ್.ಎಂ.ಅಬ್ದುಲ್ ಹೈ, ಕಾರ್ಯದರ್ಶಿ ಹರ್ಷವರ್ಧನ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net