ಬಂಗಾರ ಆಸೆ ತೋರಿಸಿ ಮಹಿಳೆಗೆ ವಂಚನೆ

Published on

ಹೂವಿನಹಡಗಲಿ: ಪಟ್ಟಣದ ಮದಲಗಟ್ಟಿ ವೃತ್ತದ ಬಳಿ ಮಹಿಳೆಯೊಬ್ಬರಿಗೆ ಬಂಗಾರ ನೀಡುವುದಾಗಿ ಆಸೆ ತೋರಿಸಿ ಕಿವಿಯೊಲೆಗಳನ್ನು ತೆಗೆದುಕೊಂಡು ವಂಚನೆ ಮಾಡಿದ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಬಸಮ್ಮ ವಂಚನೆಗೊಳಗಾದವರು. ತರಕಾರಿ ಮಾರುಕಟ್ಟೆಗೆ ಶನಿವಾರ ತೆರಳಿದ್ದಾಗ ಬಸಮ್ಮ ಒಬ್ಬರೆ ಇರುವುದನ್ನು ಖಚಿತ ಪಡಿಸಿಕೊಂಡ ವಂಚಕ ವ್ಯಕ್ತಿ ಮತ್ತು ಬಸಮ್ಮ ಅವರನ್ನು ಕರೆದು ನಿಮ್ಮ ಕಿವಿಯೊಲೆಗಳನ್ನು ನೀಡಿದರೆ ಹೆಚ್ಚಿನ ಬಂಗಾರ ನೀಡುವುದಾಗಿ ತಿಳಿಸಿದ್ದಾನೆ.

ವಂಚಕನ ಮಾತಿನಂತೆ ಬಸಮ್ಮ ಕಿವಿಯೋಲೆ ನೀಡಿದ್ದಾರೆ. ಸುಮಾರು 1.5 ತೊಲ ಬಂಗಾರವನ್ನು ಪಡೆದು ನಕಲಿ ಬಂಗಾರದ ಹಾರ ನೀಡಿ ವಂಚಿಸಿದ್ದಾನೆ. ಮಹಿಳೆ ಮನೆಗೆ ಬಂದ ನಂತರ ನಕಲಿ ಬಂಗಾರವೆಂದು ತಿಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net