ಬಲೆಗೆ ಬಿದ್ದ ‘ಬಂಗಾರ’ ಮೀನು

IMG-20250616-WA0176
ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಮೀನಿನ ಬಲೆಗೆ ಬಂಗಾರದ ಬಣ್ಣದ ಮೀನು ಬಿದ್ದಿರುವುದು.
Published on

ಕೆ.ಆರ್.ಪೇಟೆ: ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಮೀನು ಹಿಡಿಯಲು ಸೋಮವಾರ ಮುಂಜಾನೆ ಹೋದ ರಾಮಚಂದ್ರನಾಯಕ ಅವರ ಬಲೆಗೆ ಬಂಗಾರದ ಬಣ್ಣದ ಮೀನು ಬಿದ್ದಿದೆ. ವಿಷಯ ತಿಳಿದು ಸುತ್ತಮುತ್ತಲು ಜನತೆ ಮೀನನ್ನು ನೋಡಲು ಮುಗಿಬಿದ್ದರು.

4 ಕೆ.ಜಿ.ತೂಕವಿದ್ದ ಬಂಗಾರ ಬಣ್ಣದ ಗೌರಿ ಮೀನನ್ನು ವಳಗೆರೆ ಮೆಣಸದ ರಾಜು ಅವರು 1 ಸಾವಿರ ರೂ. ನೀಡಿ ಖರೀದಿಸಿದರು. ಈ ಮೀನು ಅಪರೂಪದ ತಳಿಯಾಗಿದೆ. ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಎಂದು ಮೀನು ಮಾರಾಟಗಾರ ಬಲೆ ರಾಮು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net