

ಮಂಡ್ಯ: ಆಸ್ಪತ್ರೆಗೆ ದಾಖಲಾಗಿದ್ದ ಮಗಳನ್ನು ನೋಡಲು ಸರ್ಕಾರಿ ಬಸ್‌ನಲ್ಲಿ ಬರುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಸರವನ್ನು ಶುಕ್ರವಾರ ದುಷ್ಕಮಿಗಳು ಕಳ್ಳತನ ಮಾಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಮಾಚನಹಳ್ಳಿ ಗ್ರಾಮದ ಬಚ್ಚೇಗೌಡ ಅವರ ಪತ್ನಿ ಲಿಂಗಮ್ಮ(55) ಚಿನ್ನದ ಸರ ಕಳೆದುಕೊಂಡವರು. ಈಕೆಯ ಮಗಳು ಅನಾರೋಗ್ಯ ಕಾರಣ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಗಳನ್ನು ನೋಡಲು ಲಿಂಗಮ್ಮ ನಿಡಘಟ್ಟದಲ್ಲಿ ಸರ್ಕಾರಿ ಬಸ್ ಹತ್ತಿದ್ದಾರೆ. ಅಂತೆಯೇ ಮಂಡ್ಯ ನಗರದ ನಂದಾ ವೃತ್ತದಲ್ಲಿ ಇಳಿದು ಮಿಮ್ಸ್‌ಗೆ ಹೋಗಿದ್ದಾರೆ. ಈ ಸಮಯದಲ್ಲಿ ಚಿನ್ನದ ಸರ ಇಲ್ಲದಿರುವುದನ್ನು ಮಗಳು ಗಮನಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಮಂಡ್ಯ ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.