ಕೆಲಸಕ್ಕಿದ್ದ ಮನೆಯಿಂದ ಚಿನ್ನದ ಕರಿಮಣಿ ಎಗರಿಸಿದ ಹೋಮ್ ನರ್ಸ್

crime
Published on

ಮಂಗಳೂರು: ಹೋಮ್ ನರ್ಸ್ ತಾನು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.


ಕದ್ರಿ ಬಾಳೆಬೈಲಿನ ಮನೆಯೊಂದರಲ್ಲಿ ಸೆ.6ರಿಂದ 30ರವರೆಗೆ ಹೋಮ್‌ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಕಾವ್ಯಾ ಅಲ್ಲಿನ ಮಹಿಳೆಯೋರ್ವರ ಅಂದಾಜು 2 ಲಕ್ಷ ರೂ. ಮೌಲ್ಯದ ಸುಮಾರು 35 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಿ ತಾಯಿಯ ಅನಾರೋಗ್ಯದ ನೆಪ ಹೇಳಿ ಆಕೆಯ ಊರಾದ ಮಂಡ್ಯಕ್ಕೆ ಹೋದವಳು ವಾಪಸ್ ಬಂದಿಲ್ಲ. ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net