ಬಸ್ ಹತ್ತುವಾಗ ಚಿನ್ನದ ಸರ ಕಳವು

Published on

ಮೈಸೂರು: ಬಸ್ ಹತ್ತುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ. ಶ್ರೀರಂಗಪಟ್ಟಣದ ತಾಲೂಕು ಗಿರಿಕೊಪ್ಪಲಿನ ದೇವಮ್ಮ ಅವರು ಸರ ಕಳೆದುಕೊಂಡವರು.

ದೇವಮ್ಮ ಅವರು ಇತ್ತೀಚೆಗೆ ನಂಜನಗೂಡಿಗೆ ತೆರಳಲು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಬಸ್ ಬಂದಾಗ ತುಂಬ ಜನಜಂಗುಳಿ ಇದ್ದು, ಅದರ ನಡುವೆ ಒಳ ಹೋಗಿದ್ದಾರೆ. ಈ ವೇಳೆ ಕಳ್ಳರು ಕೈ ಚಳಕ ತೋರಿದ್ದು, 1.10 ಲಕ್ಷ ರೂ. ಮೌಲ್ಯದ 37 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net