ಕೆಎಸ್‌ಆರ್‌ಟಿಸಿ ಶೌಚ ಗೃಹದಲ್ಲಿ ಚಿನ್ನದ ಸರ ಕಳವು

Doddapete police station
Published on

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚ ಗೃಹದಲ್ಲಿ ಚಿತ್ರದುರ್ಗದ ಮಹಿಳೆಯ 70 ಸಾವಿರ ರೂ, ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ.

ಚಿತ್ರದುರ್ಗದ ಪಾರ್ವತಮ್ಮ ಎಂಬುವರು ಸರ ಕಳೆದುಕೊಂಡವರು. ಪಾರ್ವತಮ್ಮ ಮತ್ತು ಅವರ ಸೊಸೆ ಸೊಸೆ ಜೂ.7ರಂದು ಶಿವಮೊಗ್ಗಕ್ಕೆ ಬಂದಿದ್ದರು. ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಪುತ್ರಿಯನ್ನು ಮಾತನಾಡಿಸಿ ಊರಿಗೆ ಹಿಂತಿರುಗುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಬಂದಾಗ ಪಾರ್ವತಮ್ಮ ಮತ್ತು ಅವರ ಸೊಸೆ ವ್ಯಾನಿಟಿ ಬ್ಯಾಗ್ ಅನ್ನು ಹೊರಗಿಟ್ಟು ಶೌಚ ಗೃಹಕ್ಕೆ ತೆರಳಿದ್ದರು.

ಬಳಿಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿತ್ರದುರ್ಗಕ್ಕೆ ಹಿಂದಿರುಗಿದ್ದರು. ರಾತ್ರಿ ಮನೆಯಲ್ಲಿ ವ್ಯಾನಿಟಿ ಬ್ಯಾಗ್ ತೆಗೆದಾಗ ಅದೊರಳಗಿದ್ದ ಪರ್ಸ್ ಇರಲಿಲ್ಲ. ಆ ಪರ್ಸ್‌ನಲ್ಲಿ 20 ಗ್ರಾಂ ತೂಕದ ಚಿನ್ನದ ಚೈನ್ ಇತ್ತು. ತಾವು ಶೌಚ ಗೃಹಕ್ಕೆ ತೆರಳಿದ್ದ ವೇಳೆ ಸರ ಇದ್ದ ಪರ್ಸ್ ಕಳ್ಳತನ ಆಗಿದೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net