

ಶಿವಮೊಗ್ಗ: ಮುಡುಬಾದಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯ ಕೈಯಲ್ಲಿದ್ದ 70 ಸಾವಿರ ರೂ. ಮೌಲ್ಯದ ಚಿನ್ನದ ಬ್ರೇಸ್‌ಲೆಟ್ ಕಳ್ಳತನವಾಗಿದೆ.
ಡಯಾನಾ ಜೋಸೆಫ್ ಎಂಬುವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮುಡುಬಾದಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್ಸಿನಲ್ಲಿ ಆಗಮಿಸಿದ್ದರು. ಬಸ್‌ನಲ್ಲಿ ಜನ ಸಂದಣಿ ಹೆಚ್ಚಿತ್ತು. ಮಕ್ಕಳಿದ್ದರಿಂದ ಕಂಡಕ್ಟರ್ ಸೀಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಶಿವಮೊಗ್ಗಕ್ಕೆ ತಲುಪಿದಾಗ ಬಸ್ ನಿಲ್ದಾಣದಲ್ಲಿ ಡಯಾನಾ ಜೋಸೆಫ್ ಮಕ್ಕಳೊಂದಿಗೆ ಕೆಳಗಿಳಿದಿದ್ದರು.
ಪತಿಗೆ ಕರೆ ಮಾಡಲು ಬ್ಯಾಗ್ ತೆಗೆಯಲು ಮುಂದಾದಾಗ ಕೈಯಲ್ಲಿದ್ದ ಬ್ರೇಸ್‌ಲೆಟ್ ಇರಲಿಲ್ಲ. ಬಸ್‌ನಲ್ಲಿ ಹುಡುಕಿದರೂ ಸಿಕ್ಕಿಲ್ಲ. ಬಸ್‌ನಲ್ಲಿ ಬರುವಾಗ 20 ಗ್ರಾಂ ತೂಕದ ಬಂಗಾರದ ಬ್ರೇಸ್‌ಲೆಟ್ ಕಳುವಾಗಿದೆ ಎಂದು ಡಯಾನಾ ಅವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.