6.37 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ

h25-aman bepari
Published on

ಹುಬ್ಬಳ್ಳಿ: ಕಳವು ಪ್ರಕರಣ ಭೇದಿಸಿರುವ ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು, ಒಬ್ಬನನ್ನು ಬಂಧಿಸಿದ್ದು, ಆತನಿಂದ 6.37 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.

ದೊಡ್ಡಮನಿ ಕಾಲನಿ 3ನೇ ಕ್ರಾಸ್‌ನ ಅಮನ್ ಬೇಫಾರಿ (24) ಬಂಧಿತ. ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 6.10 ಲಕ್ಷ ರೂ. ಮೌಲ್ಯದ 62 ಗ್ರಾಂ 400 ಮಿಲಿ ತೂಕದ ಚಿನ್ನಾಭರಣ, 27,400 ರೂ. ಮೌಲ್ಯದ 310 ಗ್ರಾಂ ಬೆಳ್ಳಿ ಆಭರಣ, ಒಟ್ಟು 5,37,400 ರೂ. ಚಿನ್ನ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಿಕ, ಪಿಎಸ್‌ಐ ರವಿ ವಡ್ಡರ ನೇತೃತ್ವದ ತಂಡ ಈ ಪ್ರಕರಣ ಭೇದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net