ಗೊಳಸಂಗಿ: ವಿಜಯಪುರ ಜಿಲ್ಲೆಯ ನೇಕಾರರ ಸಂಕಷ್ಟ ಆಲಿಸಲು ರಾಜ್ಯ ನೇಕಾರರ ನಿಯೋಗ ಡಿ.3 ರಂದು ಬೆಳಗ್ಗೆ 10 ಗಂಟೆಗೆ ಗೊಳಸಂಗಿಗೆ ಭೇಟಿ ನೀಡಲಿದೆ. ಗೊಳಸಂಗಿ ಮಾದರಿ ಬಡಾವಣೆಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ) ದ ಆವರಣದಲ್ಲಿ ಅಂದು ನಡೆಯಲಿರುವ ಸಭೆಯಲ್ಲಿ ರಾಜ್ಯ ನೇಕಾರರ ಸೇವಾ ಕೇಂದ್ರದ ಅಧ್ಯಕ್ಷ ಶಿವಲಿಂಗ ಟಿರ್ಕಿ, ಜಿಲ್ಲಾ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ವಿನಿಕುಮಾರ ಕೋಷ್ಠಿ ನೇತೃತ್ವ ವಹಿಸುವರು. ವಿಜಯಪುರ ಜಿಲ್ಲೆಯ ಕೆಎಚ್‌ಡಿಸಿ, ನೇಕಾರರ ಸಹಕಾರಿ ಸಂಘ, ವಿದ್ಯುತ್ ಮಗ್ಗ ಮತ್ತು ವೈಯಕ್ತಿಕ ನೇಕಾರರೆಲ್ಲ ಆಗಮಿಸಿ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಬೇಕು. ತದನಂತರ ಮುಂದೆ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಚಿಂತನ-ಮಂಥನ ನಡೆಸಲಾಗುತ್ತಿದೆ. ಮಾಹಿತಿಗಾಗಿ ಮೊ.ನಂ. 9980240256 ನ್ನು ಸಂಪರ್ಕಿಸಬೇಕು ಎಂದು ಹಿರಿಯ ನೇಕಾರ ಚನ್ನಮಲ್ಲ ಉಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.