

ಗೊಳಸಂಗಿ: ಗ್ರಾಮದಲ್ಲಿ ರೈತಾಪಿ ಜನರು ಬುಧವಾರ ಎಳ್ಳ ಅಮಾವಾಸ್ಯೆ ನಿಮಿತ್ತ ತಮ್ಮ ತಮ್ಮ ಹೊಲಗಳಲ್ಲಿ ಬೆಳೆದು ನಿಂತ ಫಸಲಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಸವಿದರು.
ಪೂಜೆ ಬಳಿಕ ಹೊಲದ ತುಂಬೆಲ್ಲ ನೈವೇದ್ಯೆಯೊಂದಿಗೆ ‘ಹುಲ್ಲಲಿಗೋ ಚೋಳಬುರ್ಗ್ಯೋ’ ಎಂದು ಭೂತಾಯಿಯಲ್ಲಿ ಪ್ರಾರ್ಥಿಸುತ್ತ ದೀರ್ಘ ದಂಡ ಪ್ರಣಾಮಗಳನ್ನು ಸಲ್ಲಿಸಿದರು.
ಅನ್ನದಾತರೆಲ್ಲ ಅಕ್ಕಪಕ್ಕದ ಮನೆಯವರನ್ನೆಲ್ಲ ಗದ್ದೆಗಳಿಗೆ ಕರೆದೊಯ್ದು ಎಳ್ಳು, ಶೇಂಗಾ, ಹೂರಣದ ಹೋಳಿಗೆ ಸೇರಿದಂತೆ ಬಗೆಬಗೆಯ ಮೃಷ್ಟಾನ್ನಭೋಜನ ಸವಿದರು.