ಲಾರಿ ಮಾಲೀಕನ ಕೊಲೆ

Murder
Published on

ಗೊಳಸಂಗಿ: ಗ್ರಾಮದ ಮಾದರಿ ಬಡಾವಣೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶುಕ್ರವಾರ ತಡರಾತ್ರಿ ತಮಿಳುನಾಡು ಮೂಲದ ಲಾರಿ ಚಾಲಕನನ್ನು ಕೊಲೆ ಮಾಡಲಾಗಿದೆ.
ತಮಿಳುನಾಡಿನ ನಾಗಂಪುರದೈ ಪರದರಮಿಯ ರಾಜೇಶ ಲೋಕನಾಥನ್ (35) ಕೊಲೆಯಾದ ದುರ್ದೈವಿ.
ರಾಜೇಶ್‌ನ ಎದೆ ಮತ್ತಿತರ ಭಾಗದಲ್ಲಿ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿಡಗುಂದಿ ಕಡೆಯಿಂದ ವಿಜಯಪುರದತ್ತ ಹೊರಟಿದ್ದ ಲಾರಿಯನ್ನು ಶುಕ್ರವಾರ ತಡರಾತ್ರಿ ಗೊಳಸಂಗಿ ಮಾದರಿ ಬಡಾವಣೆಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಿಲ್ಲಿಸಲಾಗಿತ್ತು. ಆದರೆ, ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಡಿವೈಎಸ್‌ಪಿ ಶಾಂತವೀರ, ಸಿಪಿಐ ಸೋಮಶೇಖರ ಜುಟ್ಟಲ್, ಕೂಡಗಿ ಎನ್‌ಟಿಪಿಸಿ ಪಿಎಸ್‌ಐ ರೇಣುಕಾ ಜಕನೂರ, ಎಎಸ್‌ಐ ಎಂ.ಎ. ಮುಲ್ಲಾ, ಹೈವೇ ಎಎಸ್‌ಐ ಎಲ್.ಡಿ. ರೂಡಗಿ ಭೇಟಿ ನೀಡಿ ಕೊಲೆಗಾರನ ಪತ್ತೆಗೆ ಜಾಲ ಬೀಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯನ್ನು ಕೂಡಗಿ ಎನ್‌ಟಿಪಿಸಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net