

ಗೊಳಸಂಗಿ: ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ರೈತರು ತಾವು ಬೆಳೆದ ತೊಗರಿಯನ್ನು ಖರೀದಿ ಕೇಂದ್ರಕ್ಕೆ ನೀಡಿ ಸರ್ಕಾರದ ಬೆಂಬಲ ಬೆಲೆಯ ಲಾಭ ಪಡೆಯಬೇಕೆಂದು ಪಿಕೆಪಿಎಸ್ ಅಧ್ಯಕ್ಷ ರಮೇಶ ಸೂಳಿಬಾವಿ ಹೇಳಿದರು.
ಸಮೀಪದ ಮುತ್ತಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಮಾತನಾಡಿ, ಮುತ್ತಗಿ ವ್ಯಾಪ್ತಿಯ ನಾಗವಾಡ, ಜೈನಾಪುರ, ಮಣ್ಣೂರ, ಹಂಗರಗಿ ಗ್ರಾಮದ ಒಟ್ಟು 585 ಜನ ರೈತರು ತೊಗರಿ ಮಾರಾಟಕ್ಕೆ ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. ಬಾಕಿ ರೈತರು ಕೂಡ 20 ಕ್ವಿಂಟಾಲ್ ತೂಕದ ಪ್ರಮಾಣದಂತೆ ತೊಗರಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಲಾಭ ಪಡೆಯಬೇಕೆಂದರು.
ಅಪ್ಪುಸ್ವಾಮಿ ಹಿರೇಮಠ, ಪಿಕೆಪಿಎಸ್ ಉಪಾಧ್ಯಕ್ಷ ಶಿವಶಂಕರಗೌಡ ಬಿರಾದಾರ, ನಿರ್ದೇಶಕರಾದ ಕಲ್ಲಪ್ಪ ಆಸಂಗಿ, ಮುತ್ತಪ್ಪ ದೇವಣಗಾವಿ, ಪರಸಪ್ಪ ಕೂಡಗಿ, ಚನ್ನಪ್ಪ ಸಿಡಿ, ಚಂದ್ರಶೇಖರ ಹೊಸಮನಿ, ಲಿಂಗರಾಜ ತೋಟದ, ಸುಭಾಷ ಸೂಳಿಬಾವಿ, ಸುರೇಶ ರಾಯಗೊಂಡ, ಚಂದಪ್ಪ ಕಮತಗಿ, ವ್ಯವಸ್ಥಾಪಕ ಮಹಾಂತೇಶ ಕಾರಜೋಳ ಮತ್ತಿತರರು ಇದ್ದರು.