ಗೊಳಸಂಗಿಯಲ್ಲಿ ಕಲಶದ ಮೆರವಣಿಗೆ ಸಂಭ್ರಮ

Golasangi, Lambani, Kumbh Mela, Durga Devi, Sant Sewalala, Goa, Maharashtra,
ಗೊಳಸಂಗಿ ಗ್ರಾಮದಲ್ಲಿ ಸಂತ ಸೇವಾಲಾಲ, ದುರ್ಗಾದೇವಿ ಕಲಶದ ಮೆರವಣಿಗೆಯಲ್ಲಿ ಗಮನ ಸೆಳೆದ ಮುತ್ತೈದೆಯರ ಕುಂಭಮೇಳ.
Published on

ಗೊಳಸಂಗಿ: ಲಂಬಾಣಿ ಶೈಲಿಯ ಉಡುಗೆ, ತೊಡುಗೆ, ಹಾಡು, ಕುಣಿತ, ನೂರಾರು ಮುತ್ತೈದೆಯರ ಕುಂಭಮೇಳ, ಸಹಸ್ರಾರು ಕುಲಬಾಂಧವರ ಸಮ್ಮುಖದಲ್ಲಿ ಗ್ರಾಮದಲ್ಲಿ ಸೋಮವಾರ ದುರ್ಗಾದೇವಿ, ಸಂತ ಸೇವಾಲಾಲರ ಕಲಶದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಹಾಡಿಗೆ ಇಡೀ ಬಂಜಾರ ಜನಾಂಗ ಕುಣಿದು ಕುಪ್ಪಳಿಸಿದ್ದು ಮನಮೋಹಕವಾಗಿತ್ತು. ದುರ್ಗಾದೇವಿ, ಸಂತ ಸೇವಾಲಾಲರ ಕಲಶದ ಸುತ್ತ ಮೊಳಗಿದ ಜಯಘೋಷ ಮುಗಿಲು ಮುಟ್ಟಿತ್ತು.

ಪತ್ರಕರ್ತ ಅಶೋಕ ರಾಠೋಡ ಮಾತನಾಡಿ, ಹೊಟ್ಟೆ ಪಾಡಿಗಾಗಿ ದೂರದ ಗೋವಾ, ಮಹಾರಾಷ್ಟ್ರ, ತಮಿಳುನಾಡಿಗೆ ವಲಸೆ ಹೋಗುವ ಇಲ್ಲಿನ ಜನರು ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಜಾತ್ರಾ ಮಹೋತ್ಸವದಲ್ಲಿ ತಪ್ಪದೆ ಪಾಲ್ಗೊಂಡು ಸಮುದಾಯದ ಏಕತೆ ಪ್ರದರ್ಶಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಮೆರವಣಿಗೆಯಲ್ಲಿ ಸ್ಥಳೀಯ ಬಂಜಾರ ಸಮಾಜದ ಅಧ್ಯಕ್ಷ ಗಂಗಾರಾಮ ನಾಯಕ, ಪ್ರಮುಖರಾದ ಶೇಖರ ಪವಾರ, ವಿ.ಎನ್.ಲಮಾಣಿ, ಮಲ್ಲು ರಾಠೋಡ, ಬಾಬು ಚವ್ಹಾಣ, ಕೃಷ್ಣಾ ರಾಠೋಡ, ನಾನು ಚವ್ಹಾಣ, ಈಶ್ವರ ಭಾವಸಿಂಗ್, ದೇವಲು ಚವ್ಹಾಣ, ದಾನು ಜಾಧವ, ಸುಭಾಷ ಚವ್ಹಾಣ, ಮೋಹನ ರಜಪೂತ, ಸುನಿತಾ ಪವಾರ, ಲಲಿತಾ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net