ಹಳಿ ತಪ್ಪಿದ ಗೂಡ್ಸ್ ರೈಲು

GLS 27-1 B
Published on

ಗೊಳಸಂಗಿ: ಸಮೀಪದ ಕೂಡಗಿ ಎನ್‌ಟಿಪಿಸಿಯ ಉಷ್ಣ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಿಲನ್ನು ಸಾಗಿಸುತ್ತಿದ್ದ ರೈಲೊಂದು ಬುಧವಾರ ಸಂಜೆ ತಾಂತ್ರಿಕ ತೊಂದರೆಯಿಂದಾಗಿ ಹಳಿ ತಪ್ಪಿತು.
ಜಾರ್ಖಂಡ್‌ನಿಂದ ಕಲ್ಲಿದ್ದಿಲನ್ನು ತುಂಬಿಕೊಂಡು ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯೊಳಗೆ ಗೂಡ್ಸ್ ರೈಲು ಆಗಮಿಸುತ್ತಿದ್ದಂತೆಯೇ ಏಕಾಏಕಿ ನಾಲ್ಕು ಬೋಗಿಗಳು ಹಳಿ ತಪ್ಪಿ ಪಕ್ಕಕ್ಕೆ ವಾಲಿವೆ. ಕೂಡಲೇ ಎಚ್ಚೆತ್ತುಕೊಂಡ ರೈಲು ಸಂಚಾಲಕರು ಮುಂಜಾಗ್ರತೆ ಕ್ರಮವಾಗಿ ರೈಲನ್ನು ನಿಲ್ಲಿಸಿ ಬೋಗಿಗಳನ್ನು ಸರಿ ದಾರಿಗೆ ತಂದು ಕಲ್ಲಿದ್ದಿಲನ್ನು ಸ್ಥಾವರ ವ್ಯಾಪ್ತಿಯ ಶೇಖರಣಾ ಘಟಕದಲ್ಲಿ ಇಳಿಸಿದ್ದಾರೆ. ಘಟನೆಯಿಂದ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net