ಕರೊನಾ ಹಗುರವಾಗಿ ಪರಿಗಣಿಸಬೇಡಿ

GLS 18-1
Published on

ಗೊಳಸಂಗಿ: ಇಡೀ ವಿಶ್ವವನ್ನೇ ನಡುಗಿಸಿದ ಹೆಮ್ಮಾರಿಯನ್ನು ಗ್ರಾಮೀಣ ಭಾಗದ ಜನತೆ ಹಗುರವಾಗಿ ಪರಿಗಣಿಸಿ ಸುಂದರವಾದ ನಿಮ್ಮ ಬದುಕಿಗೆ ನೀವೇ ಕೊಳ್ಳಿ ಇಟ್ಟುಕೊಳ್ಳದಿರಿ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಗೆಳೆಯರ ಬಳಗದ ಸಹಯೋಗದಲ್ಲಿ ಸಮೀಪದ ಗುಡದಿನ್ನಿ ಗ್ರಾಮದ 90, ಹುಣಶಾಳ-ಪಿಸಿ ಗ್ರಾಮದ 80 ನಿರಾಶ್ರಿತ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಭಾನುವಾರ ವಿತರಿಸಿ ಅವರು ಮಾತನಾಡಿದರು.
ಕರವೇ ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷ ಆನಂದ ಹಡಗಲಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ಶಾಸಕರ ಪುತ್ರ ಸತ್ಯಜೀತ್ ಪಾಟೀಲ, ಪ್ರಮುಖರಾದ ಶಂಕ್ರಯ್ಯ ವಸದ, ಎಸ್.ಎಂ. ಡವಳಗಿ, ಎಲ್.ಬಿ. ಪಾಟೀಲ, ನಿಂಗನಗೌಡ ಪಾಟೀಲ, ಹನುಮಂತ ಕೋಲಕಾರ, ಶಿವಲಿಂಗಪ್ಪ ಹೂಗಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net