

ಗೊಳಸಂಗಿ: ಮಹಾಮಾರಿ ಕರೊನಾ ನಿರ್ಮೂಲನೆಗಾಗಿ ಕನ್ಹೇರಿ ಶ್ರೀಮಠದಿಂದ ಪೂರೈಸುವ ಇಮ್ಯೂನಿಟಿ ಬೂಸ್ಟರ್ ಔಷಧ ಸೇವಿಸಬೇಕೆಂದು ತಾಪಂ ಸದಸ್ಯ ಅಮೃತ ಯಾದವ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಗ್ರಾಮದ ಹತ್ತು ಬೀದಿಗಳಲ್ಲಿ ಮಹಾರಾಷ್ಟ್ರದ ಕನ್ಹೇರಿ ಶ್ರೀಮಠದಿಂದ ಉಚಿತವಾಗಿ ಪೂರೈಸಿದ ಔಷಧ ವಿತರಣೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗರ್ಭಿಣಿ ಸೀಯರು, 13 ವರ್ಷದ ಕೆಳಗಿನವರನ್ನು ಹೊರತುಪಡಿಸಿ ಎಲ್ಲರೂ ಈ ಔಷಧ ಸೇವಿಸಬಹುದು. ಒಬ್ಬ ವ್ಯಕ್ತಿ ದಿನಕ್ಕೆ ಅರ್ಧ ಲೀಟರ್ ಪರಿಶುದ್ಧ ನೀರಿನಲ್ಲಿ 10 ಹನಿ ಇಮ್ಯೂನಿಟಿ ಬೂಸ್ಟರ್ ದ್ರಾವಣ ಮಿಶ್ರಣ ಮಾಡಿ ಬೆಳಗ್ಗೆ ಮತ್ತು ತಲಾ 125 ಮಿ.ಲೀ.ನಂತೆ ಎರಡು ದಿನ ಸೇವಿಸಬೇಕು ಎಂದರು.
ಮೊದಲ ದಿನ ಅಂದಾಜು 1460ಕ್ಕೂ ಅಧಿಕ ಜನ ಇಮ್ಯೂನಿಟಿ ಬೂಸ್ಟರ್ ಔಷಧ ಪಡೆದಿದ್ದು, ಜೂ.1, 2, 3 ರಂದು ಎಲ್ಲ ಕಡೆ ಬೆಳಗ್ಗೆ 7 ರಿಂದ 10ರವರೆಗೆ ಔಷಧ ವಿತರಣೆ ಮುಂದುವರಿಯಲಿದೆ ಎಂದರು.
ಗ್ರಾಪಂ ಸದಸ್ಯರಾದ ರಾವುತ ಸೀಮಿಕೇರಿ, ಕೇಶವ ಪವಾರ, ವಿನೋದ ಭಜಂತ್ರಿ, ಸ್ವಯಂ ಸೇವಕರಾದ ದೇವೇಂದ್ರ ಬಳಮಕರ, ನಾರಾಯಣ ಸಾಳುಂಕೆ, ಸಿದ್ದು ಕಲಬುರ್ಗಿ, ರಾಮು ಪವಾರ, ಮಹಾಂತೇಶ ಗೋಣಿ, ಆಕಾಶ ಹುಬ್ಬಳ್ಳಿ, ಮಂಜುನಾಥ ಯಾದವ, ರಾಜು ಉಪ್ಪಲದಿನ್ನಿ ಇತರರಿದ್ದರು.