ಗೊಳಸಂಗಿಯಲ್ಲಿ ವಿಜಯದಶಮಿ ಸಂಭ್ರಮ

GLS 26-2
Published on

ಗೊಳಸಂಗಿ: ಗ್ರಾಮದ ಬನಶಂಕರಿ ದೇವಿಯನ್ನು ನವರಾತ್ರಿ ನಿಮಿತ್ತ ಒಂಬತ್ತು ದಿನಗಳ ಕಾಲ ವಿಶೇಷವಾಗಿ ಆರಾಧಿಸಲಾಯಿತು.
ಹುಚ್ಚಯ್ಯಸ್ವಾಮಿ ದೇವಾಂಗಮಠ ಅವರು ನವ ದಿನ ಶ್ರೀದೇವಿ ಪುರಾಣ ಪಠಣ ಮಾಡಿದರು. ನಿತ್ಯ ನಸುಕಿನ ಜಾವ ಬನಶಂಕರಿದೇವಿ ಭಕ್ತರು ಸೇರಿ ಗ್ರಾಮದ ವಿವಿಧ ದೇವಾಲಯಗಳಲ್ಲಿ ಭಜನೆ, ಭಕ್ತಿಗೀತೆಗಳನ್ನು ಹೇಳುತ್ತ ನವರಾತ್ರಿ ಆಚರಿಸಿದರು.
ಸೋಮವಾರ ಸಂಜೆ ಗ್ರಾಮದ ಪ್ರಮುಖರು, ಗ್ರಾಪಂ ಅಧಿಕಾರಿಗಳು ಸೇರಿ ಊರಾಚೆಯ ಬನ್ನಿಮರಕ್ಕೆ ಬನ್ನಿ ಅರ್ಪಿಸಿ ನಂತರ ಇತರ ದೇವಾಲಯಗಳಲ್ಲೂ ಬನ್ನಿ ಮುಡಿದು ಪರಸ್ಪರ ವಿನಿಮಯ ಮಾಡಿಕೊಂಡು ಬಾಂಧವ್ಯ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net