ಗೊಳಸಂಗಿಯಲ್ಲಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ

Golasangi, Banashankari Rathotsava, Beeralingeshwar, Rasamanjari,
ಗೊಳಸಂಗಿ ಬನಶಂಕರಿ ದೇವಿ
Published on

ಗೊಳಸಂಗಿ: ಗ್ರಾಮದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಡಿ.11 ರಿಂದ ಚಾಲನೆ ಪಡೆದಿದ್ದು ಡಿ.19 ರವರೆಗೆ ವಿಜೃಂಭನೆಯಿಂದ ಜರುಗಲಿದೆ.

ಡಿ.14 ರಂದು ಬೆಳಗ್ಗೆ 10 ಗಂಟೆಗೆ ದೇವಿಯ ರಜತ ಪ್ರಭಾವಳಿಯ ಭವ್ಯ ಮೆರವಣಿಗೆ ಮುತ್ತೈದೆಯರ ಕುಂಭಮೇಳ, ಸಕಲ ವಾಧ್ಯಮೇಳದೊಂದಿಗೆ ಬೀರಲಿಂಗೇಶ್ವರ ದೇವಸ್ಥಾನದಿಂದ ಬನಶಂಕರಿ ದೇವಸ್ಥಾನದವರೆಗೆ ಜರುಗಲಿದೆ.

ಡಿ.15 ರಂದು ಬೆಳಗಿನ ಜಾವ 5 ರಿಂದ ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ, ಹೋಮ-ಹವನ, ಮಂಗಲಾಕ್ಷತೆ, ಬೆಳಗ್ಗೆ 9 ಗಂಟೆಗೆ ಹುಚ್ಚಯ್ಯನವರ ಕಿರು ರಥೋತ್ಸವ, ಮಧ್ಯಾಹ್ನ 1 ಗಂಟೆಗೆ ಮಾರುತೇಶ್ವರ ಕಲಶದ ಮೆರವಣಿಗೆ, ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ 10.30 ಗಂಟೆಗೆ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.16 ರಂದು ಬೆಳಗ್ಗೆ ವಿವಿಧ ಬಗೆಯ ಭಾರ ಎತ್ತುವ ಸ್ಪರ್ಧೆ, ಮಧ್ಯಾಹ್ನ 2 ಗಂಟೆಗೆ ಗ್ರಾಮದೇವತೆ ಮಹೋತ್ಸವ, ಸಂಜೆ 5 ಗಂಟೆಗೆ ಜಂಗಿಕುಸ್ತಿ ಪಂದ್ಯಾಟ, ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಇರುವುದು.

ಡಿ.17 ರಂದು ಬೆಳಗ್ಗೆ 9 ಗಂಟೆಗೆ ಮನರಂಜನೆಯ ವಿವಿಧ ಕ್ರೀಡಾ ಸ್ಪರ್ಧೆ, ರಾತ್ರಿ 10.30 ಗಂಟೆಗೆ ಸಾಮಾಜಿಕ ನಾಟಕ ಪ್ರದರ್ಶನ ಇರುವುದು.

ಡಿ.18 ರಂದು ರಾತ್ರಿ 10 ಗಂಟೆಗೆ ರಸಮಂಜರಿ ಕಾರ್ಯಕ್ರಮ, ಡಿ.19 ರಂದು ರಾತ್ರಿ 10.30 ಗಂಟೆಗೆ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ವಿವಿಧ ಸಂಘಟನೆಗಳಿಂದ ಡಿ.11 ರಿಂದ ಆರಂಭಗೊಂಡಿರುವ ಅನ್ನ ಸಂತರ್ಪಣೆ ಡಿ.19 ರವರೆಗೆ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net