

ಗೊಳಸಂಗಿ: ಸ್ಥಳೀಯ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ಬಿಎ, ಬಿಕಾಂ 6ನೇ ಸೆಮಿಸ್ಟರ್ ಪರೀಕ್ಷೆ ನಿಮಿತ್ತ ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.
ಬಿಎ ಪರೀಕ್ಷೆಗೆ ಹಾಜರಾದ 45 ಹಾಗೂ ಬಿಕಾಂ ಪರೀಕ್ಷೆಗೆ ಕುಳಿತ 28 ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.ನಂತರ ಪರೀಕ್ಷೆ ಕೊಠಡಿಯೊಳಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲಾಯಿತು. ಪ್ರಾಚಾರ್ಯ ಡಾ. ಕಾಳಿಂಗ ಗೊಳಸಂಗಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರಾದ ಪೂರ್ಣಿಮಾ ಎಸ್.ಎಸ್., ಎ್.ಆರ್. ಕುಂಟೋಜಿ, ಐ.ಎಸ್. ಕಾಳಗಿ, ಎನ್.ಎಸ್. ಬಸರಕೋಡ, ಎ.ಸಿ. ಸಿಂಹಾಸನ, ಸಿ.ಎಸ್. ಕಡಿದಾಸ ಮತ್ತು ಉಪನ್ಯಾಸಕರು ಇದ್ದರು.