

ಹುಬ್ಬಳ್ಳಿ: ಅಗಸ್ಱ ಅಂತಾರಾಷ್ಟ್ರೀಯ ಪ್ರತಿಷ್ಠಾನವು ಟೆಕ್ಸಾಸ್ ಇನ್ಸು್ಟ್ರಮೆಂಟ್ಸ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ವಿಜ್ಞಾನ-ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೋಕುಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಪ್ರಜ್ವಲ್ ಮಡಿವಾಳರ, ಮೀನಾಕ್ಷಿ ಸಿಂಗಾಡಿ ಹಾಗೂ ರೇಖಾ ಯಳಗೊನ್ನಾವರ ಗೋಕುಲ ಶಾಲೆಯನ್ನು ಪ್ರತಿನಿಧಿಸಿದ್ದರು. ಇವರು 12 ಸಾವಿರ ರೂ. ನಗದು ಬಹುಮಾನ ಪಡೆದಿದ್ದಾರೆ. ಧಾರವಾಡ ಜಿಲ್ಲೆಯ 50 ಸರ್ಕಾರಿ ಪ್ರಾಥಮಿಕ ಶಾಲೆಗಳು ಭಾಗವಹಿಸಿದ್ದರು. ಪ್ರತಿ ಶಾಲೆಯಿಂದ 6 ವಿದ್ಯಾರ್ಥಿಗಳು 2 ತಂಡಗಳಲ್ಲಿ ಪಾಲ್ಗೊಂಡಿದ್ದರು.
ಗರಗ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಶ್ರೇಯಾ ಭಾವಿಕಟ್ಟಿ, ರಕ್ಷಿತಾ ಪಾಟೀಲ, ಗಂಗೋತ್ರಿ ಕರಗೋಳಿ ದ್ವಿತೀಯ ಬಹಮಾನ (9,000 ರೂ.), ನರೇಂದ್ರ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ವೇಧಾ ಕಳಸಣ್ಣವರ, ನಿಖಿತಾ ಪೂಜಾರ, ಪವಿತ್ರಾ ಶಿಂಧೆ ತೃತೀಯ ಬಹುಮಾನ (6,000 ರೂ.) ಪಡೆದರು.
ತಡಕೋಡ ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ಲಕ್ಷ್ಮೀ ಮಟಗೋಡ್ಲಿ, ಅನುರಾಧಾ ದೊಡ್ಡವಾಡ, ಸಂಜನಾ ಅದ್ಯಾನಿ,
ಕೊಟಬಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ತಂಡಗಳು (ನಮೃತಾ ನಲವಡಿ, ಶ್ರೇಯಾ ಜಿರಗಿವಾಡಿ, ಶ್ರಾವಣ ಗಾಣಿಗೇರ ಹಾಗೂ ಶ್ರೇಯಾ ನಾಗನಗೌಡರ, ವಿಜಯಲಕ್ಷ್ಮೀ ಕುರಕುರೆ, ನವೀಣ ಜಿನ್ನಪ್ಪನವರ) ಸಮಾಧಾನಕರ ಬಹುಮಾನ (ತಲಾ 3,000 ರೂ.) ಗಳಿಸಿದವು.