ಗೋಕರ್ಣದಲ್ಲಿ ದ ಪರ್ಲ್ ಶೈನ್  ಹೋಟೆಲ್ ಫೆ. 24ರಂದು ಉದ್ಘಾಟನೆ

22-GKN PEARL
Published on

ಗೋಕರ್ಣ: ಇಲ್ಲಿನ ಮುಖ್ಯ ರಸ್ತೆಯಲ್ಲಿ ನಿರ್ವಿುಸಿರುವ ಅತ್ಯಾಧುನಿಕ ವ್ಯವಸ್ಥೆಗಳ ನೂತನ ‘ದ ಪರ್ಲ್ ಶೈನ್’ ಎಂವಿಜೆ ಹೋಟೆಲ್ ಹಾಗೂ ರೆಸಾರ್ಟ್ ಉದ್ಘಾಟನೆ ಫೆ. 24ರಂದು ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಉದ್ಯಮಿ ಮತ್ತು ಮಾಲಿಕ ಮಂಜುನಾಥ ವಿ. ಜನ್ನು ಹೇಳಿದರು.

ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು. ಗೋಕರ್ಣ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅತ್ಯಂತ ಅನುಪಮ ಕೊಡುಗೆಯಾದ ಈ ಉದ್ಯಮ ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಮದ್​ಜಗದ್ಗುರು ಶಂಕರಾಚಾರ್ಯ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಮತ್ತು ಶ್ರೀಕ್ಷೇತ್ರ ರ್ಕಯ ಶ್ರೀ ಜ್ಞಾನೇಶ್ವರಿ ದೈವಜ್ಞಬ್ರಾಹ್ಮಣ ಪೀಠಾಧಿಪತಿ, ದೈವಜ್ಞ ಬ್ರಾಹ್ಮಣ ಮಹಾಸಂಸ್ಥಾನಾಧೀಶ್ವರ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಭಾರತೀ ಮಹಾಸ್ವಾಮೀಜಿ ಅವರ ಪರಮ ಪವಿತ್ರ ಕರಕಮಲಗಳಿಂದ ಉದ್ಘಾಟನೆಯಾಗಲಿದೆ ಎಂದರು.

ಸಮಾರಂಭದ ವಿಶೇಷ ಆಮಂತ್ರಿತರಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಶಿವರಾಮ ಹೆಬ್ಬಾರ, ದಿನಕರ ಕೆ. ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಭಾಗವಹಿಸಲಿದ್ದಾರೆ ಎಂದರು. ಹೋಟೆಲ್ ನಿರ್ವಾಹಕ ಸದಾಶಿವ ಶೆಟ್ಟಿ, ವ್ಯವಸ್ಥಾಪಕ ರಾಘವ ಶೆಟ್ಟಿ ಮತ್ತು ಗ್ರಾಪಂ ಸದಸ್ಯ ಶೇಖರ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net