

ಗೋಕರ್ಣ: ಒಂಭತ್ತು ದಿನ ಪರ್ಯಂತ ನಡೆಯಲಿರುವ ಶ್ರೀಮಹಾಬಲೇಶ್ವರ ಮಹಾಶಿವರಾತ್ರಿ ಜಾತ್ರೋತ್ಸವಕ್ಕೆ ಮಂದಿರದ ಪ್ರಧಾನ ಅರ್ಚಕ ವೇ. ಅಮೃತೇಶ ಭಟ್ಟ ಹಿರೇ ಪಶ್ಚಿಮ ದ್ವಾರದಲ್ಲಿ ವೃಷಭ ಧ್ವಜಾರೋಹಣ ಕೈಗೊಳ್ಳುವ ಮೂಲಕ ಆಗಮೋಕ್ತವಾಗಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಪ್ರಧಾನ ಅರ್ಚಕರು, ಉಪಾಧಿವಂತ ವೈದಿಕರ ನೇತೃತ್ವದಲ್ಲಿ ಮಂದಿರದ ಯಾಗಶಾಲೆಯಲ್ಲಿ ಶ್ರೀ ಗಣೇಶ ಪೂಜನ, ಮೃತ್ತಿಕಾ ಹರಣ ಇತ್ಯಾದಿ ಆಗಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಪ್ರಥಮ ದಿನ ಕಾರ್ಯಕ್ರಮದಲ್ಲಿ ಮಂದಿರದ ಸಮಿತಿ ಸದಸ್ಯರಾದ ವೇ. ಸುಬ್ರಹ್ಮಣ್ಯ ಅಡಿ, ವೇ. ಪರಮೇಶ್ವರ ಪ್ರಸಾದ,ಮಹೇಶ ಹಿರೇಗಂಗೆ,ಮುಖ್ಯ ಅರ್ಚಕರಾದ ವೇ. ಗಣಪತಿ ಗಜಾನನ ಭಟ್ಟ ಹಿರೇ, ವೇ. ಚಂದ್ರಶೇಖರ ಅಡಿ, ವೇ. ಸಾಂಬ ಭಟ್ಟ ಷಡಕ್ಷರಿ, ವೇ. ಅನಂತ ಅಡಿ, ವೇ. ವಿನಾಯಕ ಪ್ರಸಾದ ರಮಣಿ, ವೇ. ಸುಬ್ರಹ್ಮಣ್ಯ ಪಂಡಿತ, ವೇ. ಪ್ರಶಾಂತ ಹಿರೇಗಂಗೆ ಮತ್ತು ಅರ್ಚಕರು, ಉಪಾಧಿವಂತರು ಮತ್ತು ವೈದಿಕರು ಉಪಸ್ಥಿತರಿದ್ದರು. ಸಂಜೆ ಶ್ರೀದೇವರ ಉತ್ಸವ ಮಂಗಳವಾದ್ಯ ಸಹಿತ ಮೆರವಣಿಗೆಯಲ್ಲಿ ಸಾಗಿ ಪುರ ಪರ್ಯಟನ ಕೈಗೊಂಡಿತು.