ಕಡಮೆ ಶ್ರೀ ಬೀರದೇವರ ಬಂಡಿಹಬ್ಬ ಸಂಪನ್ನ

kadame bandi habba
Published on

ಗೋಕರ್ಣ: ಹತ್ತಿರದ ಕಡಮೆ ಗ್ರಾಮದಲ್ಲಿ ಶ್ರೀ ಬೀರದೇವರ ಬಂಡಿಹಬ್ಬ ಸಕಲ ವಿಧಿ-ವಿಧಾನಗಳೊಂದಿಗೆ ಮಂಗಳವಾರ ಸಂಪನ್ನವಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷದ ನಂತರ ನಡೆದ ಹಬ್ಬದಲ್ಲಿ ಸುತ್ತಲಿನ ಅಪಾರ ಭಕ್ತರು ಭಾಗವಹಿಸಿ ಶ್ರೀದೇವರಿಗೆ ಸಾಂಪ್ರದಾಯಿಕವಾದ ಹರಕೆ ಸಮರ್ಪಣೆ ಮಾಡಿದರು.
ಇತ್ತೀಚೆಗೆ ಪ್ರಧಾನ ಗುನಗರಾಗಿ ನಿಯುಕ್ತರಾದ ಚೇತನ ಗುನಗ ನೇತೃತ್ವದಲ್ಲಿ ನಡೆದ ಹಬ್ಬದಲ್ಲಿ ಶ್ರೀದೇವರ ಸವಾರಿಯು ಪ್ರಥಮವಾಗಿ ಹೊಸ್ಕೇರಿ ಗ್ರಾಮದ ಹೊನ್ನಕೋಟೆ ಶ್ರೀಮಹಾಗಣಪತಿ ಮಂದಿರಕ್ಕೆ ಭೇಟಿ ನೀಡಿ ನಂತರ ಬಂಡಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿತು. ಮಂದಿರ ವ್ಯವಸ್ಥಾಪನಾ ಸಮಿತಿ ವತಿಯಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net