ಗೋಕರ್ಣದಲ್ಲಿ ಚಿತ್ರಾಪುರ ಶ್ರೀಗಳಿಂದ ಪೂಜೆ

21-gkn puje
Published on

ಗೋಕರ್ಣ: ಶಿರಾಲಿ ಶ್ರೀ ಚಿತ್ರಾಪುರ ಮಠದ ಪೀಠಾಧಿಪತಿ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಬುಧವಾರ ಪುರಾಣ ಖ್ಯಾತ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಚಾತುರ್ಮಾಸ್ಯ ಪೂರ್ವ ಆತ್ಮಲಿಂಗ ಪೂಜೆ ಕೈಗೊಂಡರು. ಮಂದಿರ ಸಮಿತಿಯ ವೇ. ಮಹಾಬಲ ಉಪಾಧ್ಯ, ವೇ. ಪರಮೇಶ್ವರ ಮಾರ್ಕಾಂಡೆ ಪೂಜೆ ನಿರ್ವಹಿಸಿದರು. ಮಂದಿರ ಸಮಿತಿಯ ದತ್ತಾತ್ರೇಯ ಹಿರೇಗಂಗೆ, ಮುರಳೀಧರ ಪ್ರಭು,ವೇ. ಶ್ರೀಪಾದ ಅಡಿ, ಸ್ಥಳೀಯ ಶ್ರೀ ಬಂಡಿಕೇರಿ ಮಠದ ವೇ. ರವಿಕಿರಣ ಭಟ್ಟ, ಉಪಾಧಿವಂತ ಮಂಡಳದ ವೇ. ಬಾಲಕೃಷ್ಣ ಜಂಭೆ ಸಹಕರಿಸಿದರು. ಮಂದಿರದ ವತಿಯಿಂದ ಶ್ರೀಗಳಿಗೆ ಪೂರ್ಣಫಲ ಸಮರ್ಪಿಸಿ ಗೌರವಿಸಲಾಯಿತು. ಬಳಿಕ ಶ್ರೀಗಳು ಇಲ್ಲಿನ ಶ್ರೀ ಚಿತ್ರಾಪುರ ಮಠದ ಶಾಖೆ ಶ್ರೀ ಬಂಡಿಕೇರಿ ಮಠದಲ್ಲಿ ವಾಸ್ತವ್ಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net