ಡಿವೈಡರ್‌ಗೆ ಗುದ್ದಿ ಅಂಗಡಿಗೆ ನುಗ್ಗಿದ ಕಾರು

30-gn car accident
Published on

ಗೋಕರ್ಣ: ಹತ್ತಿರದ ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಕಾರೊಂದು ಡಿವೈಡರ್‌ಗೆ ಬಡಿದು ನಂತರ 20 ಮೀ. ದೂರದಲ್ಲಿರುವ ರಾಮಚಂದ್ರ ಪಡ್ತಿ ಮತ್ತು ಸಾಯಿನಾಥ ಭಂಡಾರಿ ಅವರ ಅಂಗಡಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರು ಉಡುಪಿ ಕಡೆಯಿಂದ ಅಂಕೋಲಾದೆಡೆಗೆ ಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಮಧುಕರ ವೆಂಕಟೇಶ ಶೇಟ್, ವಾಣಿ ಮಧುಕರ ಶೇಟ್ ಮತ್ತು ಮೈತ್ರಿ ಮಧುಕರ ಶೇಟ್ ಅವರಿಗೆ ತಲೆ, ಸೊಂಟ ಮತ್ತು ಭುಜಕ್ಕೆ ಗಾಯಗಳಾಗಿವೆ. ಈ ಸಂಬಂಧ ಮಣಿಪಾಲ ಕರಂಬಳ್ಳಿಯ ಕಾರು ಚಾಲಕ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net