ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಪ್ರಾಪ್ತಿ

30gkn- blod camp
Published on

ಗೋಕರ್ಣ:ನಿತ್ಯ ನಮ್ಮ ರಾಜ್ಯಕ್ಕೆ ಅಗತ್ಯವಿರುವವರ ಜೀವ ರಕ್ಷಿಸಲು 6 ಲಕ್ಷ ಲೀಟರ್ ರಕ್ತ ಬೇಕು. ಅನೇಕ ತುರ್ತು ಸಂದರ್ಭಗಳಲ್ಲಿ ಅವಶ್ಯಕ ರಕ್ತ ಸಿಗದೇ ಅನೇಕರು ಜೀವನ್ಮರಣದ ನಡುವೆ ಹೋರಾಡುತ್ತಾರೆ. ನಾವು ಮಾಡುವ ರಕ್ತದಾನದಿಂದ ಇಂಥವರ ಜೀವ ಉಳಿಸಿದ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರದ ಪ್ರಮುಖ ದತ್ತಮೂರ್ತಿ ಕುಲಕರ್ಣಿ ಹೇಳಿದರು.
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರ ವತಿಯಿಂದ ಭಾನುವಾರ ಇಲ್ಲಿನ ವೇ. ಶ್ರೀಧರ ಶಂಕರ ಭಟ್ಟ ಷಡಕ್ಷರಿ ಸ್ಮರಣಾರ್ಥ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಶಿಬಿರವನ್ನು ಸ್ಥಳೀಯ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು ಉದ್ಘಾಟಿಸಿ, ರಾಷ್ಟ್ರೋತ್ಥಾನ ಪರಿಷತ್ ಕಾರ್ಯವನ್ನು ಶ್ಲಾಘಿಸಿದರು. ಸ್ಥಳೀಯ ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ರಕ್ತದಾನದ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಮೃತ್ಯುಂಜಯ ಷಡಕ್ಷರಿ, ವೇ. ಗಣೇಶ ಭಟ್ಟ ಇದ್ದರು. ಶಿಬಿರದ ಸ್ಥಳೀಯ ಸಂಘಟಕರಾದ ರವಿ ಗುನಗ, ದಿಲೀಪ ಷಡಕ್ಷರಿ, ಗಣಪತಿ ಎಂ. ಅಡಿ, ಕದಂಬ ಸಂಸ್ಥೆಯ ಮೋಹನ ಹೆಗಡೆ, ನಾಗೇಂದ್ರ ಶೇಟ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net