ಭರತ ನಾಟ್ಯ ರಂಗ ಪ್ರವೇಶ ಡಿ. 8ರಂದು

7-gkn- bharathnatya
Published on

ಗೋಕರ್ಣ: ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಇಲ್ಲಿನ ವೈಶಾಲಿ ರಾಮಕೃಷ್ಣ ಗಾಯತ್ರಿ ಅವರ ಪ್ರಥಮ ಭರತ ನಾಟ್ಯ ರಂಗ ಪ್ರವೇಶ ಡಿ. 8ರಂದು ಸಂಜೆ 4.30ಕ್ಕೆ ಭದ್ರಕಾಳಿ ಕಾಲೇಜ್ ಸಭಾಂಗಣದಲ್ಲಿ ನಡೆಯಲಿದೆ. ತಮ್ಮ ಇಂಜಿಯರಿಂಗ್ ವಿದ್ಯಾಭ್ಯಾಸದ ಜತೆಗೆ ಭರತನಾಟ್ಯವನ್ನು ಕೂಡ ಮುಂದುವರಿಸಿರುವ ಅವರು ಗುರು ಅಲೆಕ್ಸ್ ರಫೇಲ್ ಅವರ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆ ಪೂರೈಸಿದ್ದಾರೆ. ಇವರ ಮೊದಲ ರಂಗ ಪ್ರವೇಶದ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಾಟ್ಯಶ್ರೀ ಭರತನಾಟ್ಯ ಕೇಂದ್ರದ ನಿರ್ದೇಶಕಿ ಸುಮಾ ನಾಗೇಶ, ಹಿರಿಯ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಇಲ್ಲಿನ ಸಂಸ್ಕೃತ ಕಾಲೇಜ್ ನಿವೃತ್ತ ಪ್ರಾಚಾರ್ಯ ಜಿ. ಗಣಪಯ್ಯ ಹೊಳ್ಳ, ವಿದುಷಿ ನಿರ್ಮಲಾ ಹೊಳ್ಳ, ಭದ್ರಕಾಳಿ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್, ಭರತನಾಟ್ಯ ಗುರು ಅಲೆಕ್ಸ್ ರಫೇಲ್ ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net