ಪಂಚಾಂಗಕರ್ತರಿಗೆ ಬಸವ ಪುರಸ್ಕಾರ

17-GKN BAGGONA
Published on

ಗೋಕರ್ಣ: ಇಲ್ಲಿನ ಖ್ಯಾತ ಬಗ್ಗೋಣ ಪಂಚಾಂಗ ಸಂಪಾದಕ ಡಾ. ವೆಂಕಟ್ರಮಣ ವಿಘ್ನೇಶ್ವರ ಪಂಡಿತ ಅವರಿಗೆ ಬೆಂಗಳೂರಿನ ಬಸವ ಪರಿಷತ್ ವತಿಯಿಂದ ರಾಷ್ಟ್ರೀಯ ಬಸವ ಪುರಸ್ಕಾರವನ್ನು ಅಂಕಲಿ ಮಠಾಧೀಶರಾದ ಶ್ರೀವೀರಭದ್ರ ಮಹಾಸ್ವಾಮೀಜಿ ಇತ್ತೀಚೆ ನಡೆದ ವಾರ್ಷಿಕ ಸಮಾರಂಭದಲ್ಲಿ ಪ್ರದಾನ ಮಾಡಿದರು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಗಣ್ಯರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net