ಗೋಕಾಕ ಜಿಲ್ಲೆ ರಚನೆಗೆ ಎಲ್ಲರೂ ಕಟಿಬದ್ಧರಾಗಲಿ

12GKK1
Published on

ಗೋಕಾಕ ಜಿಲ್ಲೆ, ರಚನೆಗೆ, ಎಲ್ಲರೂ, ಕಟಿಬದ್ಧರಾಗಲಿ,

ಗೋಕಾಕ: ಜಿಲ್ಲೆ ಮಾಡುವಂತೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ ಕೆಗೊಳ್ಳಲಾಗುವುದು ಎಂದು ಗೋಕಾಕ ಜಿಲ್ಲಾ ರಚನೆ ಹೋರಾಟ ಚಾಲನಾ ಸಮಿತಿಯ ಅಧ್ಯ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಜಿಲ್ಲಾ ರಚನೆ ಹೋರಾಟ ಚಾಲನಾ ಸಮಿತಿ, ವಕೀಲರ ಸಂ ಹಾಗೂ ನಗರದ ವಿವಿಧ ಸಂಟನೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್​ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗೋಕಾಕ ಜಿಲ್ಲಾ ಹೋರಾಟ 4 ದಶಕಗಳಿಂದ ನಡೆಯುತ್ತಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ಅದರೂ ಜಿಲ್ಲೆ ಸ್ಥಾನಮಾನ ನೀಡಿಲ್ಲ. ಮುಂಬರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ವಕೀಲರ ಸಂದ ಅಧ್ಯ ಬಸವರಾಜ ಕೋಟಗಿ ಮಾತನಾಡಿ, ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್​ ಮುಖಂಡ ಅಶೋಕ ಪೂಜಾರಿ ಮಾತನಾಡಿದರು. ಬ್ರಹ್ಮಾನಂದ ಸ್ವಾಮೀಜಿ, ಡಾ.ಮಹಾಂತೇಶ ಕಡಾಡಿ, ಶಶಿಧರ ದೇಮಶೆಟ್ಟಿ, ಸಿ.ಡಿ. ಹುಕ್ಕೇರಿ, ಅರ್ಜುನ ಪಂಗನ್ನವರ, ಬಸವರಾಜ ಖಾನಪ್ಪನವರ, ಶಂಕರ ಗೋರೋಶಿ, ಸದಾಶಿವ ಗುದಗಗೋಳ, ನಿಂಗಪ್ಪ ಕುರಬೇಟ, ವಿಶ್ವನಾಥ ಕಡಕೋಳ, ಸಿ.ಡಿ. ಗಿಡನ್ನವರ, ಎಂ.ಎಸ್​. ವಾಲಿ, ಲಕ್ಷಿ$್ಮ ಪಾಟೀಲ, ಪವನ ಮಹಾಲಿಂಗಪೂರ, ಅಜೀಜ ಮೋಕಾಶಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net