ಕರದಂಟು ನಾಡಿನ ಕುಟುಂಬದ 108 ಜನರಿಗೆ ಬಂಪರ್ ಗ್ಯಾರಂಟಿ; ಚೌಕಾಸಿ ಕುಟುಂಬ ಫುಲ್‌ಖುಷ್

IMG_20230605_070304.webp
Published on

ಬೆಳಗಾವಿ :  ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಲ್ಲಿ ನಿಮಗೆಷ್ಟು ಗ್ಯಾರಂಟಿಗಳು ಬರುತ್ತವೆ?  ನಮಗೂ ಪ್ರತಿ ತಿಂಗಳು ಎರಡು ಸಾವಿರ ಕೊಡ್ತಾರಾ? ಎಂಬಿತ್ಯಾದಿ ಚರ್ಚೆಗಳು ಎಲ್ಲರೆಲ್ಲೂ ಕೇಳಿಬರುತ್ತಿದ್ದು, ಇಲ್ಲೊಂದು ಕುಟುಂಬಕ್ಕೆ  ಬಂಪರ್  ಗ್ಯಾರಂಟಿಗಳನ್ನು ಪಡೆಯುತ್ತಿದ್ದು, ಒಂದೇ ಕುಟುಂಬದ 108 ಸದಸ್ಯರು ಈ ಗ್ಯಾರಂಟಿಗಳ ನೇರ ಫಲಾನುಭವಿಗಳಾಗುತ್ತಿದ್ದಾರೆ.‌

ಚೌಕಾಸಿ ಕುಟುಂಬದಲ್ಲಿ 6 ಜನ ಪದವೀಧರರಿದ್ದಾರೆ.
ಚೌಕಾಸಿ ಕುಟುಂಬದಲ್ಲಿ 6 ಜನ ಪದವೀಧರರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದ  ಬೆಳಗಾವಿಯ ಗೋಕಾಕ್ ತಾಲೂಕಿನ ‌ಬಡಿಗವಾಡ ಗ್ರಾಮದ ಚೌಕಾಶಿ ಕುಟುಂಬಕ್ಕೆ ಬಂಪರ್ ದೊರೆತಿದೆ. ಈ ಮನೆಯಲ್ಲಿರುವ 108 ಜನರಿಗೂ ಕಾಂಗ್ರೆಸ್‌ನ ಐದೂ ಗ್ಯಾರಂಟಿ ಯೋಜನೆಗಳ ಲಾಭ ಸಿಗಲಿದೆ.

60ಕ್ಕೂ ಹೆಚ್ಚು ಮಹಿಳೆಯರಿದ್ದಾರೆ
60ಕ್ಕೂ ಹೆಚ್ಚು ಮಹಿಳೆಯರಿದ್ದಾರೆ
ಗೋಕಾಕ್ ತಾಲೂಕಿನ ಚೌಕಾಸಿ ಕುಟುಂಬದ ಮನೆ
ಗೋಕಾಕ್ ತಾಲೂಕಿನ ಚೌಕಾಸಿ ಕುಟುಂಬದ ಮನೆ

ಅವಿಭಕ್ತ ಕುಟುಂಬ ಆಗಿದ್ದರೂ ವಾಸಿಸಲು ಈ ಕುಟುಂಬ 9 ಮನೆಗಳನ್ನು ಹೊಂದಿದೆ. ಈ ಒಂದು ಕುಟುಂಬಕ್ಕೆಯೇ ಒಟ್ಟು ಪ್ರತಿ ತಿಂಗಳು 1800 ಯೂನಿಟ್ ವಿದ್ಯುತ್ ಸಿಗಲಿದೆ. ವಿದ್ಯಾನಿಧಿ ಯೋಜನೆ, 200 ಯುನಿಟ್ ಉಚಿತ ವಿದ್ಯುತ್, ಇದೇ ಮನೆಯಲ್ಲಿ ಈ ವರ್ಷ ಒಟ್ಟು 6 ಜನರು ಪದವಿ ಮುಗಿಸಿದ್ದು, ಎರಡು ವರ್ಷಗಳ ಅವಧಿಯಲ್ಲಿ ಈ ಕಟುಂಬಕ್ಕೆ  4.30 ಲಕ್ಷ ಹಣ ಸಿಗಲಿದೆ. 60 ಕ್ಕೂ ಅಧಿಕ ಹೆಣ್ಣು ಮಕ್ಕಳು ಈ ಮನೆಯಲ್ಲಿದ್ದು, ಈ ಎಲ್ಲರಿಗೂ ಬಸ್ ಪ್ರಯಾಣ ಉಚಿತವಾಗಿ ಸಿಗಲಿದ್ದು, ಗ್ಯಾರಂಟಿಗಳ ಬಹುಪಾಲು ಲಾಭಾಂಶ  ಸಿಗಲಿರುವ ಬಗ್ಗೆ ಕುಟಂಬದ ಸದಸ್ಯರು ಸಂತಸಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net