ನಿಮ್ಮ ಅಕ್ಕರೆಯ ಭರವಸೆ ಬೇಡ; ಪ್ರವಾಹ ಪರಿಸ್ಥಿತಿಯಿಂದ ಮುಕ್ತಿ‌ ನೀಡಿ

20240805_122602.heic
Published on

-ಸ್ವಂತ ಮನೆಗಳಿದ್ದರು ಅನಾಥರಂತೆ ಕಾಳಜಿ ಕೇಂದ್ರದಲ್ಲಿದ್ದೇವೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ನಮ್ಮ ಚಿತ್ತೆಲ್ಲಾ ಘಟಪ್ರಭಾ ನದಿಯ ಕಡೆಗೆ ಇರುತ್ತದೆ. ಯಾವಾಗ ಪ್ರವಾಹ ಬಂದುಬಿಡುತ್ತದೆ ಎಂದು ಜೀವ ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದೇವೆ. ಸರ್ಕಾರ ಶಾಶ್ವತ ಪರಿಹಾರ ನೀಡಿ ಪ್ರವಾಹ ಪರಿಸ್ಥಿತಿಯಿಂದ ನಮಗೆ ಮುಕ್ತಿ‌ ನೀಡಲಿ.

ಇದು ಘಟಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿರುವ ಗೋಕಾಕ ನಗರದ ಉಪ್ಪಾರ ಗಲ್ಲಿ, ಬೋಜಗಾ ಗಲ್ಲಿಯ ಸುತ್ತಮುತ್ತಲಿನ ‌ಪ್ರದೇಶದ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

2019ರಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಾಗ ಮುಖ್ಯಮಂತ್ರಿ ಸಮೇತ ಎಲ್ಲರು ಆಗಮಿಸಿದ್ದರು. ನಗರ ಸಭೆ ಅಧಿಕಾರಿಗಳು ಶಾಶ್ವತ ಪರಿಹಾರ‌ಕಲ್ಪಿಸುವ ಭರವಸೆ ನೀಡಿದರು.ಬಳಿಕ ತಾತ್ಕಾಲಿಕ ಮನೆಗಳ ದುರಸ್ತಿ ಪರಿಹಾರ ನೀಡಿದರು. ತದನಂತರ ದಿನಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಶಾಶ್ವತ‌‌ ಪರಿಹಾರ ನೀಡುವುದನ್ನು ಕೈಬಿಟ್ಟರು.‌ಇದೀಗ ಮತ್ತೆ ಪ್ರವಾಹ ಬಂದಿದ್ದು, ಸರ್ಕಾರವು ಅದೇ ದಾಟಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡುತ್ತಿದ್ದಾರೆ.

ಯಾವುದೇ ಪಕ್ಷದ ಸರ್ಕಾರದಿಂದ ಪರಿಹಾರ‌‌ ಕಲ್ಪಿಸದಿರುವುದರಿಂದ ನಮ್ಮ ಬದುಕು ಬೀದಿಗೆ ಬರುವಂತಾಗಿದೆ.‌ ನೀವಾದರು ನಮಗೆ ಶಾಶ್ವತ ಪರಿಹಾರ ಕಲ್ಪಿಸಿ‌ ಬೇರೆಡೆ ಮನೆ ನಿರ್ಮಿಸಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ‌‌ ಎಂದು ಪ್ರವಾಹದಿಂದ ಮನೆ ಕಳೆದುಕೊಂಡು‌‌ ಗೋಕಾಕ ಜೂನಿಯರ್ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಬೋಜಗಾ ಗಲ್ಲಿ, ಉಪ್ಪಾರ ಗಲ್ಲಿ ಪಾರ್ವತಿ ಚಿನಗೂಡಿ, ಸತ್ಯವ್ವ ರುದ್ರಪ್ಪ ಪೂಜೆರಿ, ಗೌರವ ಯಲ್ಲಪ್ಪ ರಂಕನಕೊಪ್ಪ,ತಂಗೆವ್ವ ಬಾಳಪ್ಪ ದಿವಟಗಿ,ಮಂಜುಳಾ‌ ರಂಕನಗೊಪ್ಪ,ಲಕ್ಷ್ಮೀ ಉದಯ ಚಿನಗೂಡಿ,ಗಂಗವ್ವ ಪಡದಲಿ, ಲಕ್ಕವ್ವ ಹೊನ್ನಿಕೊಳ್ಳಿ, ಸತ್ಯವ್ವ ಹೂಳಕನ್ನವರ,ರೇಷ್ಮಾ ಅರಬರ

ಸೂರಯ್ಯ ರಂಜಾನ,ರೇಣುಕಾ ಕೊಪ್ಪದ,ಮಹಾದೇವಿ ಚಿನಗೂಡಿ

ಸಾದೀಕ ಬೊಜಗಾರ, ಅಪರೋಜಾ ಮಕತುಮ್ಮ ಬೋಜಗಾರ, ಲಕ್ಷ್ಮೀ ರಾಯಪ್ಪ‌ಮಾಳಪ್ಪಗೋಲ,ಯಲ್ಲವ್ವ ಬಾಗೋಜಿ ಇತರರು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net