ಗೊಜನೂರಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

SPORTS
Published on

ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಗೊಜನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ. ಕು.ಮೈಲಾರಪ್ಪ ಸಂಶಿ 600ಮೀ ಓಟ ಪ್ರಥಮ, ಹನಮಂತ ಮಾಳಮ್ಮನವರ ಚಕ್ರ ಎಸೆತ, ಥ್ರೋಬಾಲ್ ಪ್ರಥಮ, ಪಾರ್ವತಿ ಲೆಂಕೆಣ್ಣವರ 400ಮೀ, ಗುಂಡು ಎಸೆತ, ಚಕ್ರ ಎಸೆತ ಪ್ರಥಮ ಸ್ಥಾನದ ಮೂಲಕ ವೈಯಕ್ತಿಕ ವೀರಾಗ್ರಣಿ ತನ್ನದಾಗಿಸಿಕೊಂಡಿದ್ದಾಳೆ. ಅನುಷ್ಕಾ ಹರಿಜನ 600 ಮೀ ಪ್ರಥಮ, ಎತ್ತರ ಜಿಗಿತ ತೃತೀಯ, ಲಕ್ಷ್ಮೀ ಯಳವತ್ತಿ 600 ಮೀ ದ್ವಿತೀಯ, ವಾಲಿಬಾಲ್ ಮತ್ತು ಥ್ರೋಬಾಲ್‌ದಲ್ಲಿ ಗುಂಪು ಆಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net