ಗೊಜನೂರ ಗ್ರಾಪಂಗೆ ನೀಲವ್ವ ಅಧ್ಯಕ್ಷೆ

GOJANURU
Published on

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಪಂನ 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ನೀಲವ್ವ ಮಾದರ ಮತ್ತು ಉಪಾಧ್ಯಕ್ಷರಾಗಿ ಮಹಾಂತಗೌಡ ಎಸ್. ಪಾಟೀಲ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಎಸ್‌ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 13 ಸದಸ್ಯ ಸ್ಥಾನ ಹೊಂದಿರುವ ಗ್ರಾಪಂನ ಅಧ್ಯಕ್ಷ ಸ್ಥಾನಕ್ಕೆ ನೀಲವ್ವ ಮಾದರ, ಪುಟ್ಟವ್ವ ಲಮಾಣಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತಗೌಡ ಪಾಟೀಲ, ಮಾಂತೇಶ ಹರಿಜನ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ 11 ಮತಗಳ ಅಂತರದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಚುನಾವಣಾಧಿಕಾರಿಯಾಗಿ ಈಶ್ವರ ಮೆಡ್ಲೇರಿ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net