

ಲಕ್ಷ್ಮೇಶ್ವರ: ಸಮೀಪದ ಗೊಜನೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಗದಗನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಷ್ಣವಿ ಸಂಜೀವಣ್ಣವರ (400 ಮೀ ಮತ್ತು 1,500 ಮೀ ಓಟದಲ್ಲಿ ಪ್ರಥಮ) ಮತ್ತು ಕೀರ್ತಿ ಸೊರಟೂರ (800 ಮೀ ಓಟದಲ್ಲಿ ಪ್ರಥಮ), ಮೇಘಾ ಲಮಾಣಿ (3000 ಮೀ ಓಟದಲ್ಲಿ ದ್ವಿತೀಯ) ಹಾಗೂ ವಿದ್ಯಾ ಬಾರ್ಕೇರ ತೃತೀಯ ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.