ಗೋಹತ್ಯೆ ನಿಷೇಧ, ಶ್ರೀರಾಮ ಸೇನೆ ಸ್ವಾಗತ

12123
Published on

ಹುಕ್ಕೇರಿ: ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ್ದನ್ನು ಸ್ವಾಗತಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹಾಗೂ ಕಾರ್ಯಕರ್ತರು ಗೋ ಪೂಜೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ ಮುತಾಲಿಕ, ಹಿಂದು ಧರ್ಮದಲ್ಲಿ ಗೋಮಾತೆಗೆ ಪ್ರಮುಖ ದೇವರ ಸ್ಥಾನ ನೀಡಲಾಗಿದೆ. ಅನ್ಯ ಕೋಮಿನ ಜನರು ಗೋಹತ್ಯೆ ಮಾಡುತ್ತಿರುವುದನ್ನು ಖಂಡಿಸಿ ಹಲವಾರು ವರ್ಷಗಳಿಂದ ದೇಶಾದ್ಯಂತ ಪ್ರತಿಭಟನೆ ಮಾಡಿ ಸರ್ಕಾರವನ್ನು ಶ್ರೀ ರಾಮ ಸೇನೆ ಎಚ್ಚರಿಸಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಪಣ ತೊಟ್ಟಿದ್ದು ಈಗ ಸಾರ್ಥಕವಾಯಿತು ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಸರ್ಕಾರದ ಕಾರ್ಯ ಸ್ವಾಗತಾರ್ಹವಾಗಿದೆ, ಇನ್ನು ಮುಂದೆ ಕಾಯ್ದೆ ಉಲ್ಲಂಘನೆ ಮಾಡಿದಲ್ಲಿ ಅಥವಾ ಪ್ರಚೋದನೆ ಮಾಡಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಆಗಲಿದೆ ಎಂದು ಹೇಳಿದರು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶಿವರಾಜ ನಾಯಿಕ ಕಾರ್ಯಕರ್ತರಾದ ವಿನಯ ಅರಬೋಳಿ, ಸುಭಾಷ ಕೇಸರಕರ, ವಿವೇಕ ಪುರಾಣಿಕ, ವಿಠ್ಠಲ ಹೆಗಡೆ, ಭರತ ಚಿಕ್ಕೋಡಿ, ರಾಹುಲ ಅಂಕಲೆ, ಪರುಶುರಾಮ ಭಜಂತ್ರಿ, ಅಜಿತ ಭಜಂತ್ರಿ, ಸುನೀಲ ಪೂಜೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net