ಗೋಗಟೆ ಕಾಲೇಜ್ ತಂಡ ಜನರಲ್ ಚಾಂಪಿಯನ್

IMG_20240517_201801.jpg
Published on

ಬೆಳಗಾವಿ: ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವು ಈಚೆಗೆ ಆಯೋಜಿಸಿದ್ದ ‘ವಿಶ್ವ ಸಂಗಮ 2024’ ತಾಂತ್ರಿಕ ಸ್ಪರ್ಧೆಯಲ್ಲಿ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ಜನರಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತೇಜಸ್ ಲಹೋಟಿ, ಪ್ರಜ್ವಲ್ ಪಾಟೀಲ, ನಿಧಿ ಶಿರೋಳ ಮತ್ತು ಯುವರಾಜ್ ಡಿ ಅವರ ತಂಡವು ಟ್ರೇಷರ್ ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿ ನಗದು ಬಹುಮಾನ ಪಡೆದಿದೆ.
 ಸಂತೋಷ ಪಾಟೀಲ ಮತ್ತು ಸ್ವಯಂ ಬಿ. ಅವರು ಕ್ಯಾಡ್ ಕ್ಲಾಶ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 2ನೇ ಸ್ಥಾನ ಪಡೆದಿದ್ದರೆ. ಆದಿತ್ಯ ಕಿಲ್ಲೇಕರ ಮತ್ತು ರುತುಜಾ ಜಾಧವ್ ಅವರನ್ನೊಳಗೊಂಡ ತಂಡ 3ನೇ ಸ್ಥಾನ ಗಳಿಸಿತು. ಕೆಎಲ್‌ಜಿಐಟಿ ಪ್ರಾಚಾರ್ಯ ಡಾ. ಎಂ.ಎಸ್. ಪಾಟೀಲ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ವೈಭವ ಚಾಟೆ ಸೇರಿ ಮಹಾವಿದ್ಯಾಲಯದ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net