ದೇವರ ಎತ್ತುಗಳಿಗೆ ಬೇಕು ಮೇವು

CLK VITARANE 21
Published on

ಚಳ್ಳಕೆರೆ: ಮಳೆಯ ಕೊರತೆ ಮತ್ತು ಬರದ ಪರಿಸ್ಥಿತಿಯಲ್ಲಿ ದೇವರ ಎತ್ತುಗಳ ಪೋಷಣೆಗೆ ವಿವಿಧ ಸಂಸ್ಥೆಗಳು ಮೇವು ವಿತರಣೆಗೆ ಮುಂದಾಗಬೇಕಿದೆ ಎಂದು ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ನನ್ನಿವಾಳ ಸಮೀಪ ಇರುವ ದೇವರ ಎತ್ತುಗಳಿಗೆ ಈಚೆಗೆ ಮೇವು ವಿತರಣೆ ಮಾಡಿ ಮಾತನಾಡಿದರು.

ನನ್ನಿವಾಳ, ನಲಗೇತನಹಟ್ಟಿ, ಬೇಡರೆಡ್ಡಿಹಳ್ಳಿ, ನೇರಲಗುಂಟೆ, ಹಾಯ್ಕಲ್, ಬೆಳಘಟ್ಟ, ನಾಯಕನಹಟ್ಟಿ ಹೀಗೆ ಹತ್ತಾರು ಹಟ್ಟಿಗಳಲ್ಲಿ 2 ಸಾವಿರ ದೇವರ ಎತ್ತುಗಳ ಪೋಷಣೆ ಮಾಡಲಾಗುತ್ತಿದೆ. ಬುಡಕಟ್ಟು ಪರಂಪರಾ ಪದ್ಧತಿಯಲ್ಲಿ ಸಾಕುತ್ತಿರುವ ದೇವರ ಎತ್ತುಗಳನ್ನು ಇತರ ೋಶಾಲೆ ಮತ್ತು ಬೇರೆ ಜಾನುವಾರುಗಳ ಜತೆ ಸೇರ್ಪಡೆ ಮಾಡಲಾಗುತ್ತಿಲ್ಲ. ಪ್ರತ್ಯೇಕವಾಗಿ ವ್ಯವಸ್ಥೆ ಆಗಬೇಕಿದೆ ಎಂದರು.

ಸಂಪೂರ್ಣ ಮಳೆಯ ಕೊರತೆಯಿಂದ ಅಡವಿಯಲ್ಲಿ ಜಾನುವಾರುಗಳು ಸೇರಿ ಪ್ರಾಣಿ, ಪಕ್ಷಿಗಳಿಗೂ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೂಕ ಪ್ರಾಣಿಗಳಿಗೆ ಮಾನವೀಯ ಗುಣವುಳ್ಳ ಸಂಘಟನೆಗಳು, ಜನಪ್ರತಿನಿಧಿಗಳು, ಉಳ್ಳವರು ನೆರವಿನ ಹಸ್ತ ಚಾಚಬೇಕಿದೆ ಎಂದು ಹೇಳಿದರು.
ಉಪನ್ಯಾಸಕ ಓಬಣ್ಣ, ಸಿ.ಪಿ.ಮಹೇಶ್ ಹಾಗೂ ಕಿಲಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net