ವ್ಯವಹಾರದ ಬದುಕಿನಲ್ಲಿ ದೇವರ ಅನುಗ್ರಹ

shree
Published on

ಕುಂದಾಪುರ: ಧರ್ಮದ ಮಾರ್ಗದಲ್ಲಿ ಸಾಗಿದರೆ ಶ್ರೇಯಸ್ಸು ದೊರೆಯುತ್ತದೆ. ಧರ್ಮ ಮಾರ್ಗ ಬಿಡಬಾರದು. ಎಲ್ಲ ಕಾರ್ಯಗಳಿಗೆ ಪ್ರಯತ್ನದ ಜತೆಗೆ ಭಗವಂತನ ಅನುಗ್ರಹ ಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕುಂಭಾಶಿ ವೆಂಕಟಲಕ್ಷ್ಮೀ ಟವರ್ಸ್‌ ಉದ್ಘಾಟನಾ ಸಮಾರಂಭದ ಅಂಗವಾಗಿ ಗುರುವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಉಡುಪಿ ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಚಂದ್ರಶೇಖರ ಐತಾಳರು ಸಮಾಜಮುಖಿಯಾಗಿ, ಧಾರ್ಮಿಕವಾಗಿಯೂ ಪ್ರವೃತಿ ಮಾಡಿಕೊಂಡು ಸಾಧನೆ ಮಾಡಿದ್ದಾರೆ. ಅವರು ನಡೆಸುತ್ತಿರುವ ಧಾರ್ಮಿಕ ಸೇವೆಗೆ ದೇವರ ವಿಶೇಷ ಅನುಗ್ರಹವಾಗಲಿ, ಅವರು ಇನ್ನಷ್ಟು ಧಾರ್ಮಿಕ ಸಾಮಾಜಿಕ ಸೇವೆ ಮಾಡುವಂತೆ ಅನುಗ್ರಹಿಸಲಿ ಎಂದರು.

ಚಂದ್ರಶೇಖರ ಐತಾಳ್, ಹೇಮಾವತಿ ಐತಾಳ್, ಅನಂತಪದ್ಮನಾಭ ಐತಾಳ್ ಮೊದಲಾದವರು ಸ್ವಾಮೀಜಿ ಪಾದಪೂಜೆ ನೆರವೇರಿಸಿದರು. ಗೋಪಾಡಿ ಶ್ರೀನಿವಾಸ ರಾವ್, ಚಂದ್ರಶೇಖರ ಐತಾಳ್ ಕುಟುಂಬಸ್ಥರು, ವಿವಿಧ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಕೆ.ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಶ್ರೀಧರ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net