ವೈದ್ಯರಿಗೆ ದೈವತ್ವದ ಸ್ಥಾನಮಾನ

Godly Stataus for Doctors
ವಿಜಯಪುರದ ಹೊರ ವಲಯದ ವೇದ ಇಂಟರ್​ನ್ಯಾಷನಲ್​ ಪಬ್ಲಿಕ್​ ಶಾಲೆಯಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ.ಸದಾಶಿವ ಉಕ್ಕಲಿ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಕೆಲೂರ, ಬಿ.ಎಂ. ಸುನೀಲ, ಉಮಾ ಶಂಕರ ಇದ್ದಾರೆ.
Published on

ವಿಜಯಪುರ: ವೈದ್ಯಕಿಯ ಕ್ಷೇತ್ರದಲ್ಲಿ ಆಗಿರುವ ವಿಪುಲ ಸಂಶೋಧನೆಗಳು ಫಲ ನೀಡಿದ ಪರಿಣಾಮ ಆರೋಗ್ಯ ೇತ್ರದಲ್ಲಿ ಕ್ರಾಂತಿಯೇ ಆಗಿದೆ ಎಂದು ಖ್ಯಾತ ಚಿಕ್ಕಮಕ್ಕಳ ತ ಡಾ. ಸದಾಶಿವ ಉಕ್ಕಲಿ ಹೇಳಿದರು.

ನಗರ ಹೊರ ವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಇಂಟರ್​ನ್ಯಾಷನಲ್​ ಪಬ್ಲಿಕ್​ ಶಾಲೆಯಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರಿಗೆ ಸನ್ಮಾನ ಹಾಗೂ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈದ್ಯರು ನಾರಾಯಣನ ಸ್ವರೂಪ, ರೋಗ ಗುಣಪಡಿಸುವ ವೈದ್ಯರಿಗೆ ಸಮಾಜ ದೈವತ್ವದ ಸ್ಥಾನಮಾನ ನೀಡಿದೆ. ಈ ಜವಾಬ್ದಾರಿ ವೈದ್ಯರ ಸಮೂಹದ ಮೇಲಿದೆ. ವೈದ್ಯನಾಡುವ ಆತ್ಮವಿಶ್ವಾಸದ ಮಾತುಗಳು ರೋಗಿಗಳಿಗೆ ದಿವ್ಯೌಷಧಿ ಇದ್ದಂತೆ. ಸಮಾಜ ವೈದ್ಯರನ್ನು ಅತ್ಯಂತ ಗೌರವದಿಂದ ಕಾಣುತ್ತದೆ ಎಂದರು.

ಯೋಗ, ಪ್ರಾಣಾಯಾಮ, ಸ್ವಚ್ಛತೆ, ನೈರ್ಮಲ್ಯದ ಸೂತ್ರಗಳನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಸಂಪಾದಿಸಿಕೊಳ್ಳಬಹುದು ಎಂದರು.

ವೇದ ಅಕಾಡೆಮಿ ಸಂಸ್ಥಾಪಕ ಅಧ್ಯ ಶಿವಾನಂದ ಕೆಲೂರ ಮಾತನಾಡಿ, ಆರೋಗ್ಯವೇ ಭಾಗ್ಯ. ಅನಾರೋಗ್ಯ ಉಂಟಾದಾಗ ಅದನ್ನು ದೂರ ಮಾಡುವ ವೈದ್ಯರನ್ನು ನಾವು ನಿತ್ಯ ಗೌರವಿಸಬೇಕು ಎಂದರು.

ವೈದ್ಯ ದಿನಾಚರಣೆ ಅಂಗವಾಗಿ ನಡೆದ ರಸಪ್ರಶ್ನೆಯಲ್ಲಿ ವಿಜೇತರಿಗೆ ಪಾರಿತೋಷಕ ವಿತರಿಸಲಾಯಿತು. ರಮ್ಯಕೃಷ್ಣ ನಿರೂಪಿಸಿದರು. ಭಾಗ್ಯಶ್ರೀ ಗಾಣಿಗೇರ ವಂದಿಸಿದರು. ಪ್ರಾಚಾರ್ಯ ಬಿ.ಎಂ. ಸುನೀಲ, ಕಲ್ಯಾಣಿ ಕಾಳೆ, ಉಮಾ ಶಂಕರ, ಸುಮಂಗಲಾ ನಾಯ್ಕೋಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net