ಮಹಾಲಕ್ಷ್ಮೀ ದೇವಿ ರಥೋತ್ಸವ ಸಂಭ್ರಮ

12mjr1
ಅಂಕಲಿ ಗ್ರಾಮದ ಹೊರವಲಯದ ಲಕ್ಷ್ಮೀದೇವಿ ಗುಡಿಸಲಿಗೆ ಅಗ್ನಿಸ್ಪರ್ಶ ಮಾಡುವಾಗ ನೆರೆದಿದ್ದ ಭಕ್ತ ಸಮೂಹ.
Published on

ಮಾಂಜರಿ: ಸಮೀಪದ ಅಂಕಲಿ ಗ್ರಾಮದ ಮಹಾಲಕ್ಷ್ಮೀ ದೇವಿ ಮಹಾ ರಥೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಅಂಕಲಿ ಗ್ರಾಮದ ಶ್ರೀಮಂತ ಶಿತೋಳೆ ಸರ್ಕಾರಿ ಜಾತ್ರಾ ಕಮಿಟಿ ಸದಸ್ಯ ತುಕಾರಾಮ ಪಾಟೀಲ, ಸುರೇಶ ಪಾಟೀಲ ಹಾಗೂ ಲಕ್ಷ್ಮೀದೇವಿಯ ಅನೇಕ ಕುಟುಂಬದ ಸದಸ್ಯರ ವಿಶೇಷ ಮುಂದಾಳತ್ವದಲ್ಲಿ 8 ದಿನಗಳಿಂದ ಅತಿ ವಿಜೃಂಭಣೆಯಿಂದ ದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಕೆಎಲ್‌ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಕುಟುಂಬ ಸಹಿತ ಆಗಮಿಸಿ ಮಹಾಲಕ್ಷ್ಮೀ ದೇವಿಗೆ ಉಡಿ ತುಂಬಿ ದರ್ಶನ ಪಡೆದರು.

ವಿವಿಧ ಕಾರ್ಯಕ್ರಮ ಜರುಗಿದವು. ಅಪಾರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ವಿವಿಧ ವಾದ್ಯ ಮೇಳಗಳು, ಕುಣಿತ ಗಮನ ಸೆಳೆಯಿತು. ಸಾವಿರಕ್ಕೂ ಅಕ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net