ಲಕ್ಷ್ಮೀ ದೇವಿ ಜಾತ್ರೆಗೆ ಸಿದ್ಧತೆ

Painting of Goddess Laxmi
Painting of Goddess Laxmi
Published on

ಸಂಬರಗಿ: ಸಮೀಪದ ಶಿರೂರು ಗ್ರಾಮದ ಲಕ್ಷ್ಮೀ ದೇವಿ ಜಾತ್ರೆ ಮೇ 12ರಿಂದ 14ರ ವರೆಗೆ ಹಮ್ಮಿಕೊಳ್ಳಲಾಗಿದೆ. ಮೇ 12ರಂದು ದೇವಿಗೆ ಎಣ್ಣೆ ಅರ್ಪಿಸುವ ಕಾರ್ಯಕ್ರಮದೊಂದಿಗೆ ಜಾತ್ರೆ ಪ್ರಾರಂಭವಾಗುತ್ತದೆ. ಮಧ್ಯರಾತ್ರಿ 12 ಗಂಟೆಯ ನಂತರ ಅಗ್ರಾಣಿ ನದಿ ದೇವಿಗೆ ದಂಡ ನಮಸ್ಕಾರ ಅರ್ಪಿಸಲಾಗುತ್ತದೆ.

ಮೇ 13ರಂದು ನೈವೇದ್ಯ, ಪಲ್ಲಕ್ಕಿ ಮೆರವಣಿಗೆ, ಮೇ 14ರಂದು ಪಲ್ಲಕ್ಕಿ ಮೆರವಣಿಗೆ, ಅಗ್ರಾಣಿ ನದಿ ವಿಶೇಷ ಪೂಜೆ ನಡೆಯಲಿದೆ. ಸಂಜೆ ಸಾಮಾನ್ಯ ಎತ್ತಿನ ಬಂಡಿ ಸ್ಪರ್ಧೆ, ಸೈಕಲ್ ಸ್ಪರ್ಧೆ, ಕುಸ್ತಿ, ನಂತರ ನೃತ್ಯ ಸ್ಪರ್ಧೆ ಜರುಗಲಿದೆ. ಜಾತ್ರೆಗೆ ಬರುವ ಭಕ್ತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿಯ ಮುಖ್ಯಸ್ಥ ಬಾಳು ಹಜಾರೆ, ರಘುನಾಥ ಹಜಾರೆ ಮತ್ತು ಭೀರು ಹಜಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net