ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಲಕ್ಷ್ಮೀ ದೇವಿ

BIRUR la
ಬೀರೂರಿನ ಪುರಿಭಟ್ಟಿ ಬಡಾವಣೆಯಲ್ಲಿ ಮಹಿಳೆಯರು ಲಕ್ಷ್ಮೀ ದೇವಿಗೆ ಆರತಿ ಬೆಳಗಿದರು.
Published on

ಬೀರೂರು: ಪಟ್ಟಣದ ಪ್ರತಿ ಮನೆಯಲ್ಲೂ ಮಾವು, ಬಾಳೆಕಂದು, ಮಲ್ಲಿಗೆ, ಸುಗಂಧ, ಕೇದಿಗೆಗಳಿಂದ ಅಲಂಕೃತಗೊಂಡಿದ್ದ ಲಕ್ಷ್ಮೀ ಕಳೆಗಟ್ಟಿದ್ದಳು.

ಪಟ್ಟಣದ ಕರಗಲ್ ಬೀದಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೂಲ ಮೂರ್ತಿಯನ್ನು ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮಾಡಿ ಪೂಜಿಸಲಾಯಿತು. ಭಕ್ತರು ಅರಿಶಿಣ, ಕುಂಕುಮ ಹಂಚಿಕೊಂಡು ಶುಭಾಶಯ ಕೋರಿದರು.
ಪಟ್ಟಣದ ಬಹುತೇಕ ದೇವಾಲಯಗಳಲ್ಲಿ ಧೈರ್ಯ ಲಕ್ಷ್ಮೀ, ಸಂತಾನ ಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀಗೆ ವಿವಿಧ ಅಲಂಕಾರ ಮಾಡಿ ಪೂಜಿಸಲಾಯಿತು. ಮನೆಗಳಲ್ಲಿ ಕಳಸ ಪ್ರತಿಷ್ಠಾಪಿಸಿ ಲಕ್ಷ್ಮೀ ಮುಖವಾಡಗಳನ್ನು ಕಟ್ಟಿ ಅಷ್ಟ ಲಕ್ಷ್ಮೀ ತಾಮ್ರದ ಬಿಂದಿಗೆ ಇರಿಸಿ ಸೀರೆ ಉಡಿಸಲಾಯಿತು. ಕೆಲವು ಮನೆಗಳಲ್ಲಿ ಬೆಳ್ಳಿಯ ಲಕ್ಷ್ಮೀ ಮುಖವಾಡಗಳನ್ನು ಕಳಸಕ್ಕೆ ಕಟ್ಟಿದ್ದರು. ಅದಕ್ಕೆ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡಲಾಗಿತ್ತು. ಕೆಲವರು ನೋಟುಗಳಿಂದ ಶೃಂಗಾರ ಮಾಡಿದ್ದರು. ದೇವರಿಗೆ ಹಣ್ಣು, ಚಕ್ಲಿ, ನಿಪ್ಪಟ್ಟು, ಕಜ್ಜಾಯ ಮತ್ತು ಸಿಹಿ ಪದಾರ್ಥಗಳನ್ನು ತಯಾರಿಸಿ ನೈವೇದ್ಯ ಸಮರ್ಪಿಸಿದರು. ಸಂಜೆ ಮುತ್ತೈದೆಯರನ್ನು ಮನೆಗಳಿಗೆ ಆಹ್ವಾನಿಸಿ ಶ್ಲೋಕ ಪಠಿಸಿ ಲಕ್ಷ್ಮೀಗೆ ಆರತಿ ಬೆಳಗಿದರು. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಮನೆಗಳಿಗೆ ತೆರಳಿ ಲಕ್ಷ್ಮೀಗೆ ನಮಿಸಿ ಬಾಗಿನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net