

ಐಗಳಿ: ಸಮೀಪದ ಹಳ್ಳದ ದುರ್ಗಾದೇವಿ ಜಾತ್ರಾ ಮಹೋತ್ಸವ ಗುರುವಾರ ಅದ್ದೂರಿಯಾಗಿ, ಶ್ರದ್ಧಾ ಭಕ್ತಿಯಿಂದ ನಡೆದು ಸಂಪನ್ನವಾಯಿತು. ದೇವಿಗೆ ವಿಶೇಷ ಪೂಜೆ, ದೇವಿ ಪಲ್ಲಕ್ಕಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಜನಾ ಪದಗಳ ಮೇಳ ಜನಮನ ಸೆಳೆಯಿತು.
ಸಂಜೆ ಹಾಸ್ಯ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಜನ್ಮದಿನ ಆಚರಿಸಲಾಯಿತು. ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಡಾ.ಬಾಬು ಜಗಜೀವನರಾಂ ಅವರ ಕುರಿತು ಮಾತನಾಡಿದರು. ಪ್ರವಚನ, ರೇಣುಕಾದೇವಿ ನೃತ್ಯ, ಗಾಯನ ಹಾಗೂ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆದು ಜಾತ್ರೆ ಮುಕ್ತಾಯಗೊಂಡಿತು. ಶಿವಯ್ಯ ಹಿರೇಮಠ, ಸಿ.ಎಸ್.ನೇಮಗೌಡ, ಎ.ಎಸ್.ಪಾಟೀಲ, ಬೈರು ಬಿಜ್ಜರಗಿ, ಜಿ.ಎಸ್.ಬಿರಾದಾರ, ಆಕಾಶ ಮಾದರ ಇತರರಿದ್ದರು.