"ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ" ಹುಂಡಿಗೆ ಹಾಕಿದ ಕಾಸಲ್ಲಿ ಸೊಸೆ ಬೇಡಿಕೆ

kalburgi
Published on

ಬೆಂಗಳೂರು: ಮಕ್ಕಳು ಚೆನ್ನಾಗಿರಲಿ, ಉದ್ಯೋಗ, ಆಸ್ತಿ, ಪಾಸ್ತಿ, ಮನೆ, ಮದುವೆ, ಶಿಕ್ಷಣ ಕಾರುಗಳಿಗೆ ಬೇಡಿಕೆ ಇಟ್ಟು ದೇವರ  ಹುಂಡಿಗೆ ಕಾಣಿಕೆ ಹಾಕುತ್ತಾರೆ. ಆದರೆ ಗಾಣಗಾಪುರ ದೇವಸ್ಥಾನದ ಹುಂಡಿಗೆ ಹಾಕಿದ ದುಡ್ಡಿನಲ್ಲಿ ಸೊಸೆಯೊಬ್ಬಳು ನನ್ನ ಅತ್ತೆ ಬೇಗ ಸಾಯಬೇಕು ಎಂದು ಕೋರಿದ್ದಾಳೆ.  ಈ ಕುರಿತಾದ ಸುದ್ದಿ ವೈರಲ್​ ಆಗಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರದ, ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇತ್ತೀಚೆಗೆ ನಡೆಯಿತು. ದತ್ತಾತ್ರೇಯ ಸ್ವಾಮಿ ಅಂದರೆ ಬೇಡಿದ ವರ ಕೊಡುವವನು ಎಂಬ ನಂಬಿಕೆ ಇರುವುದರಿಂದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ. ದೇವರ ಹುಂಡಿ ಎಣಿಕೆ ಸಮಯದಲ್ಲಿ ಸಿಕ್ಕ 50 ರೂ. ನೋಟಿನಲ್ಲಿ 'ನನ್ನ ಅತ್ತೆ ಬೇಗ ಸಾಯಬೇಕು'  ಬರಹ ಎಲ್ಲರನ್ನೂ ಅಚ್ಚರಿಗೆ ತಳ್ಳಿತ್ತು.

ಗಾಣಗಾಪುರ ಕ್ಷೇತ್ರದಲ್ಲಿ ಕಂಡು ಬಂದ ಈ ನೋಟಿನ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನೋಟಿನ‌ ಮೇಲೆ ಅತ್ತೆ ಬೇಗ ಸಾಯಲಿ ಎಂದು ಬರೆದ ಸೊಸೆ ಯಾರು ಎನ್ನುವುದು ಗೊತ್ತಾಗಿಲ್ಲ. ಭಕ್ತರ ಅಭೀಷ್ಟ ಈಡೇರಿಸುವ ದೇವರು ಈಗ ಏನು ಮಾಡುತ್ತಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net